ಅಲ್ಪ ಸಮಯದಲ್ಲೇ ನೆಟ್ಟಿಗರ ಮನಗೆದ್ದಿರುವ ಕಿರು ವಿಡಿಯೋ ಅಪ್ಲಿಕೇಶನ್ ‘ಜೋಶ್’ ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದೆ. ವ್ಯಾಪಕವಾದ ಬಳಕೆದಾರರು ಮತ್ತು ಅಪಾರ ಜನಪ್ರಿಯತೆಯ ಮೂಲಕ ಜೋಶ್ ಈಗಾಗ್ಲೇ ಮನೆಮಾತಾಗಿದೆ. ಅಪ್ಲಿಕೇಶನ್‌ನಲ್ಲಿರುವ ವಿಶಿಷ್ಟ ಫೀಚರ್‌ಗಳು ಮತ್ತು ಆಫರ್‌ಗಳು ಬಳಕೆದಾರರಿಗೆ ಇಷ್ಟವಾಗಿರೋದು ವಿಶೇಷ.
ಸಾಕಷ್ಟು ಮೀಟ್ ಅಪ್‌ಗಳನ್ನು ಆಯೋಜನೆ ಮಾಡುವ ಮೂಲಕ ಜೋಶ್, ಕ್ರಿಯೇಟರ್‌ಗಳಿಗೆ ಸಾಕಷ್ಟು ಅವಕಾಶಗಳನ್ನು ಕಲ್ಪಿಸಿಕೊಡ್ತಿದೆ. ಇತ್ತೀಚೆಗಷ್ಟೆ ಕನ್ನಡದ ಕ್ರಿಯೇಟರ್‌ಗಳಿಗಾಗಿಯೇ ಅಂತಹ ಸ್ನೇಹ ಕೂಟವೊಂದನ್ನು ಏರ್ಪಡಿಸಲಾಗಿತ್ತು.
NYX lounge cafeಯಲ್ಲಿ ನಡೆದ ಈ ಸ್ನೇಹ ಕೂಟ ಕ್ರಿಯೇಟರ್‌ಗಳಿಗೆ ಪರಸ್ಪರರ ಪರಿಚಯ ಮಾಡಿಕೊಳ್ಳಲು ಹಾಗೂ ಅನುಭವಗಳನ್ನು ಹಂಚಿಕೊಳ್ಳಲು ಉತ್ತಮ ವೇದಿಕೆಯಾಗಿತ್ತು. ಅಕ್ಷ ಅವರ ಹಾಡಿನೊಂದಿಗೆ ಆರಂಭವಾದ ಕಾರ್ಯಕ್ರಮಕ್ಕೆ ಕಾರ್ತಿಕ್, ಸ್ವರೂಪ್ ಮತ್ತು ಮನೀಶಾರ ಡಾನ್ಸ್ ಮತ್ತಷ್ಟು ಕಳೆ ತಂದಿತ್ತು.
ಈ ಸ್ನೇಹ ಕೂಟದಲ್ಲಿ ನಟ ಹಾಗೂ ಖ್ಯಾತ ಕಾರ್ಯಕ್ರಮ ನಿರೂಪಕ ನಿರಂಜನ್ ದೇಶಪಾಂಡೆ ಕೂಡ ಅತಿಥಿಯಾಗಿ ಆಗಮಿಸಿದ್ದು ವಿಶೇಷ. ವೈಶಾಲಿ ಸಹೋದರಿಯರ ಅತ್ಯದ್ಭುತ ನೃತ್ಯ ಅಲ್ಲಿ ನೆರೆದಿದ್ದವರ ಮನಸೂರೆಗೊಂಡಿತ್ತು.
ಕಾರ್ಯಕ್ರಮದ ಯಶಸ್ಸಿಗೆ NYX lounge café ಕೈಜೋಡಿಸಿದ್ದು ಮತ್ತೊಂದು ವಿಶೇಷತೆ. ನಿರಂಜನ್ ದೇಶಪಾಂಡೆ ಅವರ ಪತ್ನಿ, ಜೋಶ್ ಕ್ರಿಯೇಟರ್ ಯಶಸ್ವಿನಿ ದೇಶಪಾಂಡೆ ಕೂಡ ಸ್ನೇಹಕೂಟದಲ್ಲಿ ಹಾಜರಿದ್ದರು. 15 ದಿನಗಳ ಕಾಲ ನಮ್ಮ ಜೋಶ್ ಎಂಬ ಕಾರ್ಯಕ್ರಮ ಕೂಡ ಪ್ರಸಾರವಾಗಿತ್ತು. ಇದರಲ್ಲಿ ಮಹೇಶ್ ಕುಮಾರ್, ಮನೀಶಾ ಅಚ್ಚು ಹಾಗೂ ಸುಪ್ರೀತ್ ಪ್ರಿನ್ಸ್ ವಿಜೇತರಾಗಿದ್ದಾರೆ.
40ಕ್ಕೂ ಹೆಚ್ಚು ಕ್ರಿಯೇಟರ್‌ಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅತ್ಯುತ್ತಮ ಕ್ರಿಯೇಟರ್ (ಪುರುಷ ಮತ್ತು ಮಹಿಳೆ), ಜೋಶ್ ಟ್ರೆಂಡ್ ಸೆಟ್ಟರ್ ಪ್ರಶಸ್ತಿಗಳನ್ನೂ ಆಯ್ಕೆ ಮಾಡಲಾಯ್ತು. ಬೆಸ್ಟ್ ಕ್ರಿಯೇಟರ್ ಪ್ರಶಸ್ತಿ ಸ್ವರೂಪ್ ಹಾಗೂ ಐಶ್ವರ್ಯಾ ವಿನಾಯಕ್ ಪಾಲಾದ್ರೆ, ವಿನೀತ್ ಧಾರವಾಡ್ ಬೆಸ್ಟ್ ಟ್ರೆಂಡ್ ಸೆಟ್ಟರ್ ಎನಿಸಿಕೊಂಡ್ರು.