ಕನಸುಗಳು ಬಹಳ ಸುಲಭವಾಗಿ ನೆನಪುಳಿಯುತ್ತವೆ. ಮತ್ತೆ ಕೆಲವರು ನಿದ್ರೆಯಲ್ಲಿ ಕಂಡ ಸನ್ನಿವೇಶಗಳನ್ನು ನೆನಪಿಟ್ಟುಕೊಳ್ಳುವುದಕ್ಕೆ ಕಷ್ಟಪಡ್ತಾರೆ. ಇನ್ನು ಕೆಲವರು ಎಚ್ಚರವಾಗುತ್ತಿದ್ದಂತೆ ಕನಸುಗಳನ್ನು ಮರೆಯುತ್ತಾರೆ ಯಾಕೆ?
ಇದಕ್ಕೆ ಕಾರಣ ನಾವು ನಿದ್ರೆ ಮಾಡುವ ವಿಧಾನ ಅಥವಾ ರೀತಿ ಮತ್ತು ನಿದ್ರಾವಸ್ಥೆಯಲ್ಲಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ರಾಸಾಯನಿಕಗಳು.
ನಾವು ಮಲಗಿದಾಗ, ನಮ್ಮ ಮೆದುಳು ನಾಲ್ಕು ವಿವಿಧ ಮಾನಸಿಕ ಹಂತಗಳಲ್ಲಿ ಕೆಲಸ ಮಾಡುತ್ತದೆ. ಮೆದುಳು ಕನಸು ಕಾಣುವ ಅಂತಿಮ ಹಂತ ಆರ್ ಇ ಎಂ ಅಥವಾ ರ್ಯಾಪಿಡ್ ಐ ಮೂವ್ ಮೆಂಟ್ ಅಂತೀವಿ. ಮೆದುಳು ಕನಸು ಕಾಣಲು ಶುರು ಮಾಡಿದ ಕೂಡಲೇ ಆರ್ ಇ ಎಂ ನಿದ್ರೆಗೆ ಜಾರುತ್ತದೆ. ಹೃದಯ ಬಡಿತ ಕಡಿಮೆಯಾಗುತ್ತದೆ , ದೇಹವೂ ಪಾರ್ಶ್ವವಾಯುವಿನ ಸ್ಥಿತಿಯನ್ನು ತಲಪುತ್ತದೆ. ಇದನ್ನು ಅಟೋನಿಯಾ ಅಂತೀವಿ. ಈ ಹಂತದಲ್ಲಿ ನಮ್ಮ ಮಿದುಳಿನಲ್ಲಿ ಎರಡು ರಾಸಾಯನಿಕಗಳ ಮಟ್ಟಗಳು ಬದಲಾಗುತ್ತವೆ.
ಅಸೆಟೈಲ್ಕೋಲಿನ್ ಮತ್ತು ನೊರ್ಪಿನ್ಫ್ರಿನ್ ಗಳಲ್ಲಿ ಆಗುವ ಬದಲಾವಣೆಗೆ ಕನಸುಗಳು ನೆನಪಿಟ್ಟುಕೊಳ್ಳುವುದು ಕಷ್ಟವಾಗುತ್ತದೆ. ನಾವು ಮೊದಲು ಎಚ್ಚರವಾದಾಗ ಕನಸುಗಳು ನಂಬಲಾಗದಷ್ಟು ದುರ್ಬಲವಾಗಿರುತ್ತವೆ? ಏಕೆ ಎನ್ನುವುದಕ್ಕೆ ನಿಜವಾಗ್ಲೂ ಉತ್ತರವಿಲ್ಲ ಅಂತಾರೆ ಸಂಶೋಧಕರು. ಇನ್ನು ಶನಿವಾರ ಅಥವಾ ಭಾನುವಾರ ನಿದ್ದೆ ಮಾಡುವಾಗ ಬೀಳುವ ಕನಸುಗಳನ್ನು ನೆನಪಿಡುವ ಅತ್ಯುತ್ತಮ ಸಮಯ ಅಂತಾರೆ ಸಂಶೋಧಕರು.