ಕನಸು ಬೀಳೋದು ಸಾಮಾನ್ಯ. ಕನಸಿನಲ್ಲಿ ಅನೇಕ ವಸ್ತುಗಳು ಕಾಣಿಸಿಕೊಳ್ಳುತ್ತವೆ. ಕನಸಿನಲ್ಲಿ ಕಂಡ ಯಾವ ವಸ್ತು ಶುಭ ಹಾಗೂ ಯಾವುದು ಅಶುಭ ಎಂಬುದು ಅನೇಕರಿಗೆ ತಿಳಿದಿರುವುದಿಲ್ಲ. ಶಿವನಿಗೆ ಸಂಬಂಧಿಸಿದ ಕೆಲ ವಸ್ತುಗಳು ಕನಸಿನಲ್ಲಿ ಕಂಡ್ರೆ ಅದೃಷ್ಟ ಬಾಗಿಲು ತೆರೆದಿದೆ ಎಂದೇ ಅರ್ಥ.
ಕನಸಿನಲ್ಲಿ ಶಿವಲಿಂಗ ಕಾಣಿಸಿಕೊಂಡ್ರೆ ಅನೇಕ ದಿನಗಳಿಂದ ಕಾಡ್ತಿದ್ದ ಸಮಸ್ಯೆಗೆ ಸದ್ಯದಲ್ಲಿಯೇ ಪರಿಹಾರ ಸಿಗಲಿದೆ ಎಂದರ್ಥ. ಕನಸಿನಲ್ಲಿ ಶಿವಲಿಂಗ ಕಂಡ ಮರುದಿನ ಶಿವಲಿಂಗಕ್ಕೆ ಹಾಲನ್ನು ಅರ್ಪಿಸಬೇಕು.
ಕನಸಿನಲ್ಲಿ ಶಿವ ತಾಂಡವ ನೃತ್ಯವಾಡುತ್ತಿದ್ದಂತೆ ಕಂಡರೆ ಇದು ಅಶುಭವಲ್ಲ. ಶುಭ ಫಲದ ಸಂಕೇತ. ಸ್ವಲ್ಪ ಪ್ರಯತ್ನಪಟ್ಟರೆ ಯಶಸ್ಸು ಸಿಗುತ್ತೆ ಎಂಬುದು ಇದ್ರ ಅರ್ಥ. ಧನ ವೃದ್ಧಿಯ ಸಂಕೇತವೂ ಹೌದು.
ಶಿವನ ದೇವಸ್ಥಾನ ಸ್ವಪ್ನದಲ್ಲಿ ಕಂಡರೆ ದೀರ್ಘ ಕಾಲದಿಂದ ಕಾಡುತ್ತಿದ್ದ ರೋಗ ಗುಣಮುಖವಾಗಲಿದೆ ಎಂದು ಅರ್ಥ.
ಕನಸಿನಲ್ಲಿ ಶಿವನ ಹಾವು ಕಾಣಿಸಿಕೊಂಡರೆ ಧನ ಲಾಭವಾಗಲಿದೆ ಎಂದರ್ಥ. ಹಾವು ನಿಮ್ಮ ಹಿಂದೆ ಇರುವಂತೆ ಕಂಡ್ರೆ ನಿಮಗೆ ನಾಗದೇವತೆಯ ಕೃಪೆಯಾಗಿದೆ ಎಂದು ಅರ್ಥೈಸಿಕೊಳ್ಳಿ.