
ಜ್ಯೋತಿಷ್ಯದ ಪ್ರಕಾರ ಕನಸಿನಲ್ಲಿ ಕಾಣುವ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಅರ್ಥವಿದೆ. ಕೆಲವೊಂದು ಕನಸುಗಳು ಆಹ್ಲಾದಕರವಾಗಿದ್ದರೆ ಮತ್ತೆ ಕೆಲವೊಂದು ಕನಸುಗಳು ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಆಪತ್ತಿನ ಬಗ್ಗೆ ಮುನ್ಸೂಚನೆ ನೀಡುತ್ತದೆ.
ಜ್ಯೋತಿಷ್ಯದ ಪ್ರಕಾರ, ಯಾವ ಕನಸು ಬಿದ್ದರೆ ಯಾವ ಫಲ ಅಂತಾ ನೋಡೋದಾದ್ರೆ:
ಕಣ್ಣಿಗೆ ಕಾಡಿಗೆ ಹಚ್ಚಿಕೊಂಡಂತೆ ಕಂಡ್ರೆ ದೈಹಿಕ ನೋವು ಎದುರಿಸಬೇಕಾಗುತ್ತದೆ.
ಕತ್ತರಿಸಿದ ಶವದ ಕೈ ಕಂಡಲ್ಲಿ ಹತ್ತಿರ ಸಂಬಂಧಿಯ ಸಾವು.
ಒಣಗಿದ ಉದ್ಯಾನವನ ಕಂಡರೆ ಕಷ್ಟ ಪ್ರಾಪ್ತಿ.
ತೋಳ ಕಂಡರೆ ಶತ್ರುಗಳ ಭಯ ಎದುರಾಗಲಿದೆ.
ಕನಸಿನಲ್ಲಿ ರಾಜಕಾರಣಿ ಸತ್ತಂತೆ ಕಂಡರೆ ದೇಶಕ್ಕೆ ಆಪತ್ತು.
ಪರ್ವತಗಳು ಅಲ್ಲಾಡಿದಂತೆ ಕಂಡರೆ ಆರೋಗ್ಯ ಸಮಸ್ಯೆ.
ಪೂರಿಯ ಊಟ ಮಾಡಿದಂತೆ ಕಂಡರೆ ಸಂತೋಷದ ಸುದ್ದಿ ಸಿಗಲಿದೆ.
ತಾಮ್ರ ಕಂಡರೆ ರಹಸ್ಯ ಪತ್ತೆಯಾಗಲಿದೆ ಎಂದರ್ಥ.
ಹಾಸಿಗೆಯಲ್ಲಿ ಮಲಗಿದಂತೆ ಕಂಡ್ರೆ ಗೌರವ ಪ್ರಾಪ್ತಿ.
ಹಸಿರು ಕಾಡು ಕಂಡರೆ ಆನಂದ ಸಿಗಲಿದೆ.
ಆಕಾಶದಲ್ಲಿ ಹಾರಾಡಿದಂತೆ ಕಂಡರೆ ಸಮಸ್ಯೆಯಿಂದ ಪರಿಹಾರ ಸಿಗಲಿದೆ.
ಸಣ್ಣ ಚಪ್ಪಲಿ ಧರಿಸಿದಂತೆ ಕಂಡಲ್ಲಿ ಸ್ತ್ರೀ ಜೊತೆ ಜಗಳ ಗ್ಯಾರಂಟಿ.
ಸ್ತ್ರೀ ಜೊತೆ ಲೈಂಗಿಕ ಕ್ರಿಯೆ ಮಾಡಿದಂತೆ ಕನಸಿನಲ್ಲಿ ಕಂಡರೆ ಧನ ಪ್ರಾಪ್ತಿ.
ಬೇರೆಯವರ ಜೊತೆ ಜಗಳ ಆಡಿದಂತೆ ಕಂಡಲ್ಲಿ ಸಂತೋಷ ಸಿಗಲಿದೆ.
ಚಂದ್ರಗ್ರಹಣ ನೋಡಿದಂತೆ ಕಂಡರೆ ರೋಗ ಪ್ರಾಪ್ತಿಯಾಗಲಿದೆ.