ಜಗತ್ತಿನಲ್ಲಿ ಅನೇಕರು ಭೂತ-ಪಿಶಾಚಿಗೆ ಹೆದರುತ್ತಾರೆ. ಭೂತದ ಹೆಸರು ಕೇಳಿದ್ರೂ ಅನೇಕರು ಭಯಪಡ್ತಾರೆ. ಸ್ವಪ್ನದಲ್ಲಿ ಭೂತ ಕಾಣಿಸಿಕೊಂಡ್ರೆ ಬೆಚ್ಚಿ ಬೀಳ್ತಾರೆ. ಕನಸಿನಲ್ಲಿ ಕಾಣುವ ಕೆಲ ಭೂತಗಳು ಶುಭ ಮತ್ತು ಅಶುಭ ಸಂಕೇತವನ್ನು ನೀಡುತ್ತವೆ.
ಕನಸಿನಲ್ಲಿ ಭಯಾನಕ ಭೂತ ಕಾಣಿಸಿಕೊಂಡ್ರೆ ಭವಿಷ್ಯದಲ್ಲಿ ನಷ್ಟವಾಗುತ್ತದೆ ಎಂಬುದರ ಸಂಕೇತ. ಈ ಕನಸು ಬಿದ್ರೆ ಎಚ್ಚರವಾಗಿರಬೇಕು. ಶತ್ರುಗಳಿಂದ ಹಾನಿಯಾಗುವ ಸಾಧ್ಯತೆಯಿರುತ್ತದೆ.
ಕನಸಿನಲ್ಲಿ ಗೊತ್ತಿರುವ ವ್ಯಕ್ತಿ ಅಥವಾ ಸ್ನೇಹಿತರ ಭೂತ ಕಾಣಿಸಿಕೊಂಡ್ರೆ ಅಥವಾ ಅದು ಸತ್ತಂತೆ ಕಂಡ್ರೆ ಪ್ರಯಾಣದ ಸಂಕೇತ. ಆದ್ರೆ ಅದು ಅಹಿತಕರ ನೋವಿನ ಪ್ರಯಾಣವಾಗಿರುತ್ತದೆ.
ಕನಸಿನಲ್ಲಿ ಭೂತದ ಜೊತೆ ಮಾತನಾಡಿದಂತೆ ಕಂಡ್ರೆ ಇದು ಕೆಟ್ಟದಾಗುವುದ್ರ ಸಂಕೇತ. ಜೀವನದಲ್ಲಿ ಆಸ್ತಿಪಾಸ್ತಿ ನಷ್ಟವಾಗುತ್ತದೆ.
ಕನಸಿನಲ್ಲಿ ಹೆಣ್ಣು-ಗಂಡಿನ ಭೂತ ಕಾಣಿಸಿಕೊಂಡ್ರೆ ಇದು ಶುಭ ಸಂಕೇತ. ಮುಂದಿನ ದಿನಗಳಲ್ಲಿ ಒಳ್ಳೆಯ ಕೆಲಸವಾಗಲಿದೆ ಎಂದರ್ಥ. ಶುಭ ಘಟನೆಗಳು ನಡೆಯಲಿದೆ ಎಂಬ ಸೂಚನೆ.