ಗಾಢ ನಿದ್ರೆಯಲ್ಲಿ ಜನರು ಕನಸು ಕಾಣ್ತಾರೆ. ಕನಸಿನಲ್ಲಿ ಅನೇಕ ವಿಷ್ಯಗಳು ಕಾಣಿಸುತ್ತವೆ. ಕೆಲ ಶುಭ ಘಟನೆಗಳಾಗಿದ್ದರೆ ಮತ್ತೆ ಕೆಲವು ಅಶುಭ ಘಟನೆಗಳಾಗಿರುತ್ತವೆ. ಕನಸಿನಲ್ಲಿ ದೇವರನ್ನು ಕಂಡರೆ ಯಾವ ಫಲ ಸಿಗಲಿದೆ ಎಂಬುದನ್ನು ಸಮುದ್ರಶಾಸ್ತ್ರದಲ್ಲಿ ಹೇಳಲಾಗಿದೆ.
ಭಗವಂತ ವಿಷ್ಣು ಕನಸಿನಲ್ಲಿ ಕಂಡರೆ ಅದು ಅದೃಷ್ಟದ ಸಂಕೇತವಾಗಿದೆ. ಎಲ್ಲ ಸಮಸ್ಯೆ ದೂರವಾಗಲಿದೆ ಎಂಬುದನ್ನು ಇದು ಸೂಚಿಸುತ್ತದೆ.
ಕನಸಿನಲ್ಲಿ ತಾಯಿ ಲಕ್ಷ್ಮಿ ದೇವಿ ಕಾಣಿಸಿಕೊಂಡರೆ ಅಪಾರ ಸಂಪತ್ತು ಸಿಗಲಿದೆ ಎಂಬುದರ ಸೂಚನೆಯಾಗಿದೆ. ಉದ್ಯೋಗ-ವ್ಯವಹಾರದ ಬದಲು ಬೇರೆ ಮಾರ್ಗದಿಂದ ಆರ್ಥಿಕ ಲಾಭವಾಗಲಿದೆ ಎಂಬುದನ್ನು ಇದು ಸೂಚಿಸಲಿದೆ.
ಕನಸಿನಲ್ಲಿ ಹನುಮಂತ ಕಾಣಿಸಿದ್ರೆ ಶತ್ರುಗಳ ಮೇಲೆ ಜಯ ಸಾಧಿಸಲಿರುವ ಸೂಚನೆಯಾಗಿದೆ. ಕೋರ್ಟ್ ವ್ಯವಹಾರದಲ್ಲಿ ನಿಮಗೆ ಜಯ ಸಿಗಲಿದೆ ಎಂದರ್ಥ.
ಭಗವಂತ ರಾಮ ಸ್ವಪ್ನದಲ್ಲಿ ಕಾಣಿಸಿದಲ್ಲಿ ದೊಡ್ಡ ಯಶಸ್ಸಿನ ಸಂಕೇತವಾಗಿದೆ. ಶೀಘ್ರವೇ ಯಶಸ್ಸು ಲಭಿಸಲಿದೆ.
ಕನಸಿನಲ್ಲಿ ಶಿವಲಿಂಗ ಕಾಣಿಸುವುದು ಶುಭ ಸಂಕೇತ. ಎಲ್ಲ ಸಮಸ್ಯೆ ಶೀಘ್ರವೇ ಕಡಿಮೆಯಾಗಲಿದೆ ಎಂಬುದರ ಸೂಚನೆ.
ಕೃಷ್ಣ ಕನಸಿನಲ್ಲಿ ಕಾಣಿಸಿದ್ರೆ ಪ್ರೇಮ ವ್ಯವಹಾರದಲ್ಲಿ ಯಶಸ್ಸು, ಪ್ರಗತಿ ಸಿಗಲಿದೆ ಎಂಬ ಸೂಚನೆಯಾಗಿದೆ.
ತಾಯಿ ದುರ್ಗೆ ಕನಸು ಬಿದ್ದರೆ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬಸ್ಥರು ಬೇಗ ಚೇತರಿಸಿಕೊಳ್ಳಲಿದ್ದಾರೆಂಬ ಸಂಕೇತವಾಗಿದೆ.