
ಕನಸುಗಳು ಮುಂದೆ ನಡೆಯುವುದನ್ನು ತಿಳಿಸುತ್ತವೆ ಎನ್ನುತ್ತಾರೆ. ಹಾಗಾದ್ರೆ ಕನಸಿನಲ್ಲಿ ಅನ್ನ ಕಂಡುಬಂದರೆ ಅಥವಾ ನೀವು ಊಟ ಮಾಡುವುದು ಅಥವಾ ಬೇರೆಯವರು ಊಟ ಮಾಡುವುದು ಕಂಡುಬಂದರೆ ಏನರ್ಥ ಎಂಬುದನ್ನು ತಿಳಿದುಕೊಳ್ಳಿ.
ನಿಮ್ಮ ಕನಸಿನಲ್ಲಿ ರೊಟ್ಟಿ ಅಥವಾ ಚಪಾತಿ ತಿನ್ನುತ್ತಿರುವುದು ಕಂಡರೆ ನಿಮಗೆ ಮುಂದಿನ ದಿನಗಳಲ್ಲಿ ಧನ ಲಾಭವಾಗುತ್ತದೆ ಎಂದರ್ಥ.
ಕನಸಿನಲ್ಲಿ ನೀವು ಅನ್ನ ಸಾಂಬಾರ್ ತಿನ್ನವುದು ಕಂಡು ಬಂದರೆ ಇದು ನಿಮಗೆ ಕೆಟ್ಟದನ್ನು ಸೂಚಿಸುತ್ತದೆ. ಮುಂದಿನ ದಿನಗಳಲ್ಲಿ ಧನ ಹಾನಿಯಾಗುವುದು ಮತ್ತು ಶತ್ರುಗಳು ಹೆಚ್ಚಾಗುವುದನ್ನು ತಿಳಿಸುತ್ತದೆ. ಮನಸ್ಸಿನಲ್ಲಿ ಬಿರುಕು ಮೂಡುವಂತಹ ಘಟನೆ ನಡೆಯುತ್ತದೆ ಎಂದರ್ಥ.
ಒಂದು ವೇಳೆ ಊಟ ಕಂಡರೂ ಅದನ್ನು ಮಾಡಲು ಸಾಧ್ಯವಾಗದಿದ್ದರೆ ನೀವು ಮಾಡುವ ಕೆಲಸಕ್ಕೆ ಹೆಚ್ಚು ಪರಿಶ್ರಮ ಬೇಕು. ಅದಕ್ಕೆ ಇನ್ನಷ್ಟು ಶ್ರಮ ಹಾಕಬೇಕು ಎಂಬುದನ್ನು ತಿಳಿಸುತ್ತದೆ. ನಿಮ್ಮ ಶತ್ರುಗಳ ಜೊತೆ ಊಟ ಮಾಡಿದ ಕನಸು ಕಂಡರೆ ಅವರಿಂದ ನಿಮಗೆ ಯಾವುದೇ ತೊಂದರೆ ಇಲ್ಲ ಎಂದರ್ಥವಂತೆ.