ರಾತ್ರಿ ಮಲಗಿದಾಗ ಕನಸುಗಳು ಬೀಳೋದು ಸಾಮಾನ್ಯ. ಪ್ರತಿಯೊಂದು ಸ್ವಪ್ನಗಳು ತನ್ನದೆ ಆದ ಅರ್ಥವನ್ನು ಹೊಂದಿವೆ. ನಿಮಗೆ ಬೀಳುವ ಕನಸಿನ ಮೂಲಕವೇ ಮುಂದೇನಾಗಬಹುದು ಎಂಬುದನ್ನು ನೀವು ಅರ್ಥೈಸಿಕೊಳ್ಳಬಹುದು.
ಕನಸಿನಲ್ಲಿ ಸರ್ಪವನ್ನು ಕಂಡರೆ ಅದು ಶುಭವೆಂದು ಹೇಳಲಾಗುತ್ತದೆ. ಈ ಕನಸು ಧನಾಗಮನದ ಸಂಕೇತ. ಅದೃಷ್ಟ, ಸಂತೋಷ ಮತ್ತು ಶಾಂತಿಯ ಸಂಕೇತವಾಗಿದೆ.
ತಪಸ್ಸು ಮಾಡುತ್ತಿರುವ ವ್ಯಕ್ತಿ ಕನಸಿನಲ್ಲಿ ಕಾಣಿಸಿಕೊಂಡರೆ ಅದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಯನ್ನು ಸೂಚಿಸುತ್ತದೆ. ವಾಸ್ತವವಾಗಿ ಇದು ಸ್ವಯಂ ಪ್ರಚಾರಕ್ಕಾಗಿ ಒಂದು ಅವಕಾಶವನ್ನು ನೀಡುತ್ತದೆ.
ಕನಸಿನಲ್ಲಿ ತರ್ಪಣ ಬಿಟ್ಟಂತೆ ಅಥವಾ ಶ್ರಾದ್ಧ ಮಾಡಿದಂತೆ ಕಂಡಲ್ಲಿ ಮನೆಯಲ್ಲಿ ಅಥವಾ ಆಪ್ತರ ಸಾವಾಗುತ್ತದೆ ಎಂಬುದರ ಸಂಕೇತ.
ಕನಸಿನಲ್ಲಿ ಪೋಸ್ಟ್ ಮ್ಯಾನ್ ಕಾಣಿಸಿಕೊಂಡಲ್ಲಿ ನಿಮಗೆ ಶೀಘ್ರವೇ ಸಂದೇಶವೊಂದು ಸಿಗಲಿದೆ ಎಂದರ್ಥ.