ವಿಶ್ವದ ಪ್ರತಿಯೊಬ್ಬ ವ್ಯಕ್ತಿಗೂ ಕನಸು ಬೀಳುತ್ತದೆ. ಸ್ವಪ್ನಕ್ಕೂ ನಿಜ ಜೀವನಕ್ಕೂ ಸಂಬಂಧವಿದೆ ಎನ್ನಲಾಗುತ್ತದೆ. ಸ್ವಪ್ನದಲ್ಲಿ ಕಾಣುವ ಕೆಲ ಸಂಗತಿಗಳು ನಮಗೆ ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಕನಸಿನಲ್ಲಿ ಮಕ್ಕಳು ಕಾಣಿಸಿಕೊಳ್ಳುವುದುಂಟು. ಮಕ್ಕಳು ಕಾಣಿಸಿಕೊಂಡ್ರೆ ಏನು ಸಂಕೇತ ಎಂಬುದನ್ನು ನಾವು ಹೇಳ್ತೆವೆ.
ಕನಸಿನಲ್ಲಿ ಅಳುತ್ತಿರುವ ಮಗು ಕಂಡರೆ ಅದು ಅಶುಭ ಸಂಕೇತ. ಕನಸಿನಲ್ಲಿ ಅಳುತ್ತಿರುವ ಮಗು ಕಾಣಿಸಿಕೊಂಡ್ರೆ ಮುಂದಿನ ದಿನಗಳಲ್ಲಿ ನೀವು ದೊಡ್ಡ ವೈಫಲ್ಯ ಎದುರಿಸಲಿದ್ದೀರಿ ಎಂದರ್ಥ. ಮನೆಯಲ್ಲಿ ದೊಡ್ಡ ಗಲಾಟೆ ನಡೆಯಲಿದೆ ಎಂಬ ಸೂಚನೆಯನ್ನೂ ಇದು ನೀಡುತ್ತದೆ.
ಕನಸಿನಲ್ಲಿ ಅವಳಿ ಮಕ್ಕಳು ಕಾಣಿಸಿಕೊಂಡ್ರೆ ಬೇರೆ ಬೇರೆ ಜನರಿಗೆ ಇದ್ರ ಸಂಕೇತ ಬೇರೆ ಬೇರೆಯಾಗಿರುತ್ತದೆ. ವ್ಯಾಪಾರಿಗೆ ಅವಳಿ ಮಕ್ಕಳು ಕನಸಿನಲ್ಲಿ ಕಂಡ್ರೆ, ಮುಂದಿನ ದಿನಗಳಲ್ಲಿ ವ್ಯಾಪಾರಿಗೆ ಲಾಭವಾಗಲಿದೆ ಎಂದರ್ಥ. ಅವಿವಾಹಿತನಿಗೆ ಕನಸಿನಲ್ಲಿ ಅವಳಿ ಮಕ್ಕಳು ಕಾಣಿಸಿಕೊಂಡ್ರೆ ಶೀಘ್ರವೇ ಮದುವೆಯಾಗಲಿದೆ ಎಂಬುದರ ಸೂಚನೆ. ಮಹಿಳೆಗೆ ಅವಳಿ ಮಕ್ಕಳು ಕಂಡ್ರೆ ಸದ್ಯವೆ ಆಕೆ ಮಡಿಲು ತುಂಬಲಿದೆ ಎಂಬುದರ ಸಂಕೇತ.
ಮಹಿಳೆ ಕನಸಿನಲ್ಲಿ ಶಿಶುವನ್ನು ಕಂಡ್ರೆ ಆಕೆಗೆ ಶೀಘ್ರವೇ ಸಂತಾನ ಪ್ರಾಪ್ತಿಯಾಗಲಿದೆ.
ದೊಡ್ಡ ಮಕ್ಕಳು ಕನಸಿನಲ್ಲಿ ಕಂಡ್ರೂ ಶುಭಕರ. ಮುಂದಿನ ದಿನಗಳಲ್ಲಿ ಮಂಗಳಕಾರ್ಯ ನಡೆಯಲಿದೆ, ಎಲ್ಲವೂ ಶುಭವಾಗಲಿದೆ ಎಂದರ್ಥ. ಪದೇ ಪದೇ ಸ್ವಪ್ನದಲ್ಲಿ ಮಕ್ಕಳು ಕಾಣಿಸಿಕೊಂಡ್ರೆ ಸಕಾರಾತ್ಮಕ ಬದಲಾವಣೆಯಾಗಲಿದೆ ಎಂದರ್ಥೈಸಿಕೊಳ್ಳಿ.