ಮುಂಬೈ: ಎಟಿಎಂ ಕದಿಯುವ ಖದೀಮರ ಬಗ್ಗೆ ನೀವು ಕೇಳಿರುತ್ತೀರಿ. ಆದ್ರೆ, ಇಲ್ಲೊಂದೆಡೆ ಜೆಸಿಬಿ ಬಳಸಿ ಎಟಿಎಂ ದೋಚಲು ಪ್ರಯತ್ನಿಸಿರುವ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.
ಕಳ್ಳರ ಗುಂಪೊಂದು ಪೆಟ್ರೋಲ್ ಪಂಪ್ ಬಳಿ ನಿಲ್ಲಿಸಿದ್ದ ಜೆಸಿಬಿಯನ್ನು ಕದ್ದು ಎಟಿಎಂ ಕ್ಯಾಬಿನ್‌ಗೆ ನುಗ್ಗಿಸಿದೆ. ಬಳಿಕ ಎಟಿಎಂ ಯಂತ್ರವನ್ನು ಕಿತ್ತು ಅದರ ಎಲ್ಲಾ ವಿದ್ಯುತ್ ಸಂಪರ್ಕಗಳನ್ನು ಹಾನಿಗೊಳಿಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ಈ ದೃಶ್ಯ ಸಿಸಿ ಕ್ಯಾಮರಾದೊಳಗೆ ಸೆರೆಯಾಗಿದೆ.
ವರದಿಗಳ ಪ್ರಕಾರ, ಏಪ್ರಿಲ್ 23-24 ರಂದು (ಶನಿವಾರ-ಭಾನುವಾರ) ಮಧ್ಯರಾತ್ರಿಯ ಸುಮಾರಿಗೆ ನಡೆದಿದೆ. ಮೀರಜ್ ಕೈಗಾರಿಕಾ ಪಟ್ಟಣದಲ್ಲಿ ಆಕ್ಸಿಸ್ ಬ್ಯಾಂಕ್ ಎಟಿಎಂ ಇರುವ ಮುಖ್ಯ ರಸ್ತೆಯಲ್ಲಿ ಖದೀಮರು ಕೈಚಳಕ ತೋರಿದ್ದಾರೆ. ಘಟನೆಯ ಸಂಪೂರ್ಣ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕದ್ದ ಜೆಸಿಬಿ ಬಳಸಿ ಎಟಿಎಂ ಯಂತ್ರಕ್ಕೆ ಹತ್ತಿಸಿದ್ದಾರೆ. ವೈರಲ್ ಆಗಿರುವ ಸಿಸಿ ಟಿವಿ ದೃಶ್ಯಾವಳಿಗಳಲ್ಲಿ ವ್ಯಕ್ತಿಯೊಬ್ಬ ಎಟಿಎಂ ಕ್ಯಾಬಿನ್‌ಗೆ ಪ್ರವೇಶಿಸಿ, ಹಠಾತ್ತನೆ ಹೊರಟುಹೋಗಿದ್ದಾನೆ. ಶೀಘ್ರವೇ ಜೆಸಿಬಿ ಯಂತ್ರವು ಗಾಜಿನ ಬಾಗಿಲುಗಳನ್ನು ಒಡೆದು ಹಾಕಿದ್ದು, ನಂತರ ಬುಲ್ಡೋಜರ್‌ನ ದೈತ್ಯ ಉಗುರುಗಳಿಂದ ಎಟಿಎಂ ಯಂತ್ರವನ್ನು ಬಡಿದಿದೆ. 700 ಕೆ.ಜಿ.ಗೂ ಅಧಿಕ ತೂಕದ ಉಕ್ಕಿನ ಎಟಿಎಂ ಯಂತ್ರವನ್ನು ಅಗೆದು ಅದನ್ನು ಕ್ಯಾಬಿನ್‌ನಿಂದ ಕನಿಷ್ಠ 5-6 ಮೀಟರ್ ದೂರಕ್ಕೆ ಎಸೆಯಲಾಗಿದೆ. ಈ ವೇಳೆ ಅಲ್ಲಿ ಭಾರಿ ಶಬ್ಧ ಕೇಳಿ ಬಂದಿದೆ.
ಗಲಾಟೆ ಕೇಳಿ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದಾರೆ. ಜನಸಮೂಹ ಬರುವುದನ್ನು ಕಂಡ ಕಳ್ಳರು ಗಾಬರಿಗೊಂಡಿದ್ದಾರೆ. ಜೆಸಿಬಿ ಹಾಗೂ ಲೂಟಿ ಮಾಡಿದ 27 ಲಕ್ಷ ರೂ. ಹಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಇನ್ನು ಈ ಸಂಬಂಧ ಪಕ್ಕದ ಪೆಟ್ರೋಲ್ ಪಂಪ್‌ನಿಂದ ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ನಾವು ಸುಮಾರು 3-4 ಶಂಕಿತರನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
https://twitter.com/rupin1992/status/1518850005028671488?ref_src=twsrc%5Etfw%7Ctwcamp%5Etweetembed%7Ctwterm%5E1518850005028671488%7Ctwgr%5E%7Ctwcon%5Es1_&ref_url=https%3A%2F%2Fwww.india.com%2Fviral%2Fviral-video-thieves-steal-jcb-bulldozes-atm-machine-with-it-later-flees-without-stealing-cash-bulldozer-thief-5358910%2F