ಮದುವೆ, ಶಾರೀರಿಕ ಸಂಬಂಧ, ಗರ್ಭಧಾರಣೆ ಹೀಗೆ ದಾಂಪತ್ಯಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿರುತ್ತಾರೆ. ಕೆಲವೊಂದು ಸಂಶೋಧನೆಗಳು ಆಶ್ಚರ್ಯಕರ ಫಲಿತಾಂಶವನ್ನು ನೀಡುತ್ತದೆ. ಗರ್ಭಧಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಈ ಹಿಂದೆ ನಡೆದ ಸಂಶೋಧನೆಯೂ ಇಂತಹದ್ದೇ ಒಂದು ವರದಿ ನೀಡಿದೆ.
ಅತಿಯಾದ ಬೆಳಕು ಗರ್ಭಧಾರಣೆಗೆ ಮಾರಕ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಮಲಗುವ ಕೋಣೆಯಲ್ಲಿ ಬೆಳಕಿನ ಪ್ರಮಾಣ ಹೆಚ್ಚಿದ್ದಲ್ಲಿ ಅದು ಗರ್ಭಧಾರಣೆ ಮೇಲೆ ಪ್ರಭಾವ ಬೀರುತ್ತದೆಯಂತೆ. ವಿಜ್ಞಾನಿಗಳ ಪ್ರಕಾರ ಬೆಡ್ ರೂಂಗೆ ಹಾಕಿರುವ ಪರದೆಯಿಂದ ಒಳ ಬರುವ ಲೈಟ್, ವಿದ್ಯುತ್ ಲೈಟ್ ಆಗಿರಲಿ ಇಲ್ಲ, ಗಾಡಿಗಳ ಬೆಳಕಾಗಿರಲಿ ಇದು ಮಹಿಳೆಯ ಫಲವತ್ತತೆ ಮೇಲೆ ಪ್ರತಿಕೂಲ ಪ್ರಭಾವ ಬೀರುತ್ತದೆಯಂತೆ.
ಕಂಪ್ಯೂಟರ್ ಹಾಗೂ ಟ್ಯಾಬ್ಲೆಟ್ ಬೆಳಕು ಕೂಡ ಅಪಾಯಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಗರ್ಭಧಾರಣೆ ಕಷ್ಟವಾಗುತ್ತಿರುವ ಮಹಿಳೆಯರು ಸುಖಕರ ನಿದ್ರೆ ಮಾಡಬೇಕೆಂದು ವಿಜ್ಞಾನಿಗಳು ಹೇಳಿದ್ದಾರೆ. ನಿದ್ರೆ ಹಾಗೂ ಗರ್ಭಧಾರಣೆ ನಡುವೆ ನಿಕಟ ಸಂಬಂಧವಿದೆ. ಹಾಗೆ ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡಬೇಕು. ಜೊತೆಗೆ ಕೋಣೆಯ ದೀಪ ಮಂದವಾಗಿರಲೆಂದು ವಿಜ್ಞಾನಿಗಳು ಸಲಹೆ ನೀಡಿದ್ದಾರೆ. ರಾತ್ರಿ, ಮಹಿಳೆಯರು ಕತ್ತಲಿನಲ್ಲಿ ಮಲಗುವುದು ಸೂಕ್ತ ಎಂದೂ ವಿಜ್ಞಾನಿಗಳು ಹೇಳಿದ್ದಾರೆ.