
ಅಡುಗೆ ಮನೆಯಲ್ಲಿ ಅಥವಾ ಬಟ್ಟೆ ಕಟ್ಟಿಂಗ್ ಹೀಗೆ ಅನೇಕ ಕೆಲಸಕ್ಕೆ ಕತ್ತರಿಗಳನ್ನು ಬಳಸುತ್ತಿರುತ್ತೇವೆ.
ನಿರಂತರವಾಗಿ ಬಳಸುವುದರಿಂದ ಅಥವಾ ಕೆಲವೊಮ್ಮೆ ಬಳಸದೇ ಹಾಗೇ ಇಟ್ಟಿರುವುದರಿಂದ ಕೂಡ ಮನೆಯಲ್ಲಿ ಬಳಸುವ ಕತ್ತರಿ ಹರಿತವನ್ನು ಕಳೆದುಕೊಂಡಿರುತ್ತದೆ.
ಇಲ್ಲಿ ಸುಲಭವಾಗಿ ಕತ್ತರಿಗಳನ್ನು ಹರಿತಗೊಳಿಸುವ ವಿಧಾನ ಇದೆ ಟ್ರೈ ಮಾಡಿ.
ಅಂಗಡಿಗಳಲ್ಲಿ ಸ್ಯಾಂಡ್ ಪೇಪರ್ ಸಿಗುತ್ತದೆ. ಇದನ್ನು ತೆಗೆದುಕೊಂಡು ಬಂದು ಕತ್ತರಿಯ ಸಹಾಯದಿಂದ ತೆಳುವಾಗಿ ಉದ್ದಕ್ಕೆ ಕತ್ತರಿಸಿಕೊಳ್ಳಿ. 10ರಿಂದ 12 ಪೀಸ್ ಕತ್ತರಿಸುವುದರೊಳಗೆ ನೀವು ಕತ್ತರಿ ಹರಿತವಾಗುವುದನ್ನು ಗಮನಿಸಬಹುದು. ಸ್ಯಾಂಡ್ ಪೇಪರ್ ಕತ್ತರಿಯ ಬ್ಲೇಡ್ ಅನ್ನು ಶಾರ್ಪ್ ಮಾಡುತ್ತದೆ,
8 ಇಂಚು ಉದ್ದದ ಅಲ್ಯುಮಿನಿಯಂ ಪಾಯಿಲ್ ಶೀಟ್ ಅನ್ನು ಉದ್ದಕ್ಕೆ ಸ್ವಲ್ಪ ದಪ್ಪಕ್ಕೆ ಮಡಚಿಕೊಳ್ಳಿ. ನಂತರ ಇದನ್ನು ಸಪೂರಕ್ಕೆ ಕತ್ತರಿಯ ಸಹಾಯದಿಂದ ಕತ್ತರಿಸಿಕೊಳ್ಳಿ. ಇದು ಕೂಡ ಕತ್ತರಿಯ ಬ್ಲೇಡ್ ಅನ್ನು ಹರಿತಗೊಳುಸುತ್ತದೆ.
ಹಾರ್ಡ್ ವೇರ್ ಶಾಪ್ ಗಳಲ್ಲಿ ಶಾರ್ಪ್ ನಿಂಗ್ ಕಲ್ಲು ಸಿಗುತ್ತದೆ. ಕತ್ತರಿಯನ್ನು ಇದಕ್ಕೆ ಉಜ್ಜುವುದರಿಂದ ಕೂಡ ಕತ್ತರಿ ಶಾರ್ಪ್ ಆಗುತ್ತದೆ.