ವಿಶ್ವದಲ್ಲಿ ಸಾಕಷ್ಟು ಸುಂದರ ಸ್ಥಳಗಳಿವೆ. ಅದ್ರಲ್ಲಿ ಸ್ವಿಜರ್ಲ್ಯಾಂಡ್ ಕೂಡ ಒಂದು. ತನ್ನ ಸೌಂದರ್ಯದಿಂದ ಎಲ್ಲರ ಮನೆ ಮಾತಾಗಿದೆ ಸ್ವಿಜರ್ಲ್ಯಾಂಡ್. ಬಹುತೇಕ ಪ್ರವಾಸಿಗರು ರಜೆ ಕಳೆಯಲು ಹಾಗೂ ಹನಿಮೂನ್ ಗಾಗಿ ಸ್ವಿಜರ್ಲ್ಯಾಂಡ್ ಗೆ ಹೋಗ್ತಾರೆ.
ಸ್ವಿಜರ್ಲ್ಯಾಂಡ್ ನ ಬರ್ಗುನ್ ಕಣ್ಮನ ಸೆಳೆಯುವ ಪ್ರದೇಶ. ನೈಸರ್ಗಿಕ ಸೌಂದರ್ಯ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಆದ್ರೆ ಇಲ್ಲಿನ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವಂತಿಲ್ಲ. ಇಲ್ಲಿ ಫೋಟೋಗ್ರಫಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಿಯಮ ಮೀರಿ ಫೋಟೋ ಹೊಡೆದ್ರೆ ದಂಡ ಕಟ್ಟಬೇಕಾಗುತ್ತೆ.
ಗೋವುಗಳಿಗಾಗಿ ಇಲ್ಲಿ ಪ್ಲೇ ಮಾಡಲಾಗುತ್ತೆ ‘ಭಜನೆ’
ಬರ್ಗುನ್ ಜನರೇ ಫೋಟೋಗ್ರಫಿ ನಿಷೇಧದ ನಿರ್ಧಾರ ತೆಗೆದುಕೊಂಡಿದ್ದಾರೆ. ಹಳ್ಳಿಯ ಪ್ರತಿಯೊಂದು ಕಡೆ ಛಾಯಾಗ್ರಹಣ ನಿಷೇಧಿಸಲಾಗಿದೆ ಎಂಬ ಬೋರ್ಡ್ ಹಾಕಲಾಗಿದೆ. ಇಲ್ಲಿನ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿಯುವ ಬದಲು ನಿಮ್ಮ ಕಣ್ಣುಗಳಲ್ಲಿ ತುಂಬಿಕೊಳ್ಳಿ. ಅದನ್ನು ಅನುಭವಿಸಿ ಎಂದು ಬರೆಯಲಾಗಿದೆ.
ಪ್ರವಾಸಿಗರು ಇಲ್ಲಿನ ಸೌಂದರ್ಯವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಅದನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಾರೆ. ಬರ್ಗುನ್ ಗೆ ಬರಲಾಗದೆ ಕೇವಲ ಫೋಟೋದಲ್ಲಿ ಸೌಂದರ್ಯ ನೋಡಿದ ಜನರಿಗೆ ಬೇಸರವಾಗುವುದು ಸಹಜ. ಜನರು ಬರ್ಗುನ್ ನೋಡದೆ ಬೇಸರಪಟ್ಟುಕೊಳ್ಳುವುದು ಬೇಡ ಎನ್ನುವ ಕಾರಣಕ್ಕೆ ಗ್ರಾಮಸ್ಥರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.