ದಕ್ಷಿಣದ ಕಾಶ್ಮೀರ ಎಂದೇ ಕರೆಯಲ್ಪಡುವ ಮಡಿಕೇರಿ ಪ್ರವಾಸಿಗರ ಸ್ವರ್ಗ. ವರ್ಷವಿಡಿ ಮಡಿಕೇರಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ.
ನೋಡಬಹುದಾದ ಅನೇಕ ಸ್ಥಳಗಳು ಇಲ್ಲಿದ್ದು, ಮಳೆಗಾಲದಲ್ಲಿ ಅಬ್ಬಿಫಾಲ್ಸ್ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುವುದೇ ಮನಸಿಗೆ ಮುದ ನೀಡುತ್ತದೆ.
ಈ ಭಾಗದಲ್ಲಿ ನಿರಂತರ ಮಳೆಯಾಗಿದ್ದು, ಹಸಿರಿನ ಸೊಬಗು ಹೆಚ್ಚಾಗಿದೆ. ದಟ್ಟ ಹಸಿರಿನ ನಡುವೆ ಹಾಲಿನಂತೆ ಧುಮ್ಮಿಕ್ಕುವ ಅಬ್ಬಿಫಾಲ್ಸ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಹೆಚ್ಚಿನ ಪ್ರವಾಸಿಗರು ಆಗಮಿಸುತ್ತಾರೆ.
ಬೇಸಿಗೆಯಲ್ಲಿ ಆಹ್ಲಾದಕರ ವಾತಾವರಣಕ್ಕಾಗಿ ಮಡಿಕೇರಿಗೆ ಬರುವ ಪ್ರವಾಸಿಗರು ಮಳೆಗಾಲದಲ್ಲಿ ಪ್ರಕೃತಿ ಸೌಂದರ್ಯದ ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳುತ್ತಾರೆ.
ಅಬ್ಬಿಫಾಲ್ಸ್ ನಲ್ಲಿ 80 ಅಡಿ ಎತ್ತರದಿಂದ ನೀರು ಬೀಳುವ ರಭಸಕ್ಕೆ ನೀರಿನ ಹನಿಗಳು ಮೈಗೆ ಮುತ್ತಿಕ್ಕುತ್ತವೆ. ಹಿತವಾದ ಗಾಳಿ, ದೃಶ್ಯ ವೈಭವಗಳು ಹೊಸತೊಂದು ಲೋಕಕ್ಕೆ ಕರೆದೊಯ್ಯುತ್ತವೆ.
ಮಡಿಕೇರಿ ಸುತ್ತ ಮುತ್ತ ಇನ್ನೂ ಅನೇಕ ಪ್ರವಾಸಿ ಸ್ಥಳಗಳಿದ್ದು, ಮೊದಲೇ ಪ್ಲಾನ್ ಮಾಡಿಕೊಂಡು ಹೋದರೆ ಅನುಕೂಲವಾಗುತ್ತದೆ. ನೀವು ಮಳೆಗಾಲದಲ್ಲಿ ಅಬ್ಬಿಫಾಲ್ಸ್ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ.