ಸ್ವಾತಂತ್ರ್ಯೋತ್ಸವದ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ ಗಾಜಿನ ಮನೆಯಲ್ಲಿ ಮೈಸೂರು ಉದ್ಯಾನ ಕಲಾಸಂಘ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದೆ
ಈ ಬಾರಿ ಡಾ. ರಾಜ್ ಮತ್ತು ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ಈ ಫಲಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಇದರಲ್ಲಿ ಈ ಇಬ್ಬರು ಮಹನೀಯರ ಜೀವನ ಆಧಾರಿತ ಪ್ರದರ್ಶನ ಇರುವುದು ಲಾಲ್ ಬಾಗ್ ಗೆ ವಿಶೇಷ ಕಳೆ ತಂದಿದೆ.
1922ರಿಂದ ನಿರಂತರವಾಗಿ ನಡೆಯುತ್ತಿರುವ ಈ ಫಲ ಪುಷ್ಪ ಪ್ರದರ್ಶನ ಎರಡನೇ ಮಹಾಯುದ್ಧ ಮತ್ತು ಕೊರೊನಾ ಸಂದರ್ಭದಲ್ಲಿ ಮಾತ್ರ ಸ್ಥಗಿತಗೊಂಡಿತ್ತು.
ಶುಕ್ರವಾರ ಉದ್ಘಾಟನೆಗೊಂಡಿರುವ ಈ ಫಲ ಪುಷ್ಪ ಪ್ರದರ್ಶನ ಮುಂದಿನ 10 ದಿನಗಳ ಕಾಲ ನಡೆಯಲಿದ್ದು, ಕಣ್ಮನ ಸೆಳೆಯುತ್ತಿರುವ ಇದರ ವೀಕ್ಷಣೆಗೆ ಜನಸಾಗರ ಹರಿದು ಬರಲಿದೆ.