ಡಾರ್ಜಲಿಂಗ್ ಬಹುಜನರ ನೆಚ್ಚಿನ ಪ್ರವಾಸಿ ತಾಣ. ಅದರಲ್ಲೂ ನವ ವಧು-ವರರಿಗೆ ಹೇಳಿಮಾಡಿಸಿದ ಹನಿಮೂನ್ ಜಾಗ. ಇಲ್ಲಿನ ಹಿಮಾಚ್ಛಾದಿತ ಗಿರಿಶೃಂಗಗಳು, ಬೌದ್ಧಾಲಯಗಳು ಅದ್ಭುತ ಪ್ರವಾಸದ ಅನುಭೂತಿ ಕೊಡುತ್ತವೆ. ಇದು ಸಿಕ್ಕಿಂನ ರಾಜಧಾನಿಯೂ ಹೌದು.
ಇಲ್ಲಿನ ಪ್ರಮುಖ ಮೂರು ಅಕರ್ಷಣೆಗಳೆಂದರೆ ಕಾಂಚನಗಂಗಾ ಪರ್ವತದಿಂದ ಕಾಣುವ ಅಭೂತಪೂರ್ವ ಸೂರ್ಯೋದಯ, ಯುನೆಸ್ಕೋ ವಿಶ್ವ ಪ್ರವಾಸಿ ತಾಣ ಡಾರ್ಜಲಿಂಗ್ ಟಾಯ್ಟ್ರೈನ್ ಹಾಗೂ ಇಲ್ಲಿನ ವಿಶಿಷ್ಟ ಚಹಾ.
ಡಾರ್ಜಲಿಂಗ್ ನಿಂದ 11 ಕಿಮೀ ದೂರದಲ್ಲಿ ಟೈಗರ್ ಹಿಲ್ಸ್ ಇದೆ. ಇಲ್ಲಿ ನಿಂತರೆ ಹಿಮಾಲಯ ಶ್ರೇಣಿಯ ಮೇರು ಶಿಖರಗಳಾದ ಮೌಂಟ್ ಎವರೆಸ್ಟ್ ಮತ್ತು ಕಾಂಚನಗಂಗಾ ಪರ್ವತಗಳ ವಿಹಂಗಮ ನೋಟ ಕಣ್ಣಿಗೆ ಹಬ್ಬವುಂಟು ಮಾಡುತ್ತದೆ. ಇಲ್ಲಿಗೆ ಬೀಳುವ ಸೂರ್ಯನ ಮೊದಲ ಕಿರಣಗಳು ಪರ್ವತಕ್ಕೆ ಹೊದಿಸಿದ ಚಿನ್ನದಂತೆ ಕಾಣುತ್ತದೆ.
ಪರ್ವತ ಪಟ್ಟಣದ ನಡುವೆ ಹಾದು ಹೋಗುವ ರೈಲು ಇಲ್ಲಿನ ಮತ್ತೊಂದು ಆಕರ್ಷಣೆ. ಇದರಲ್ಲಿ ಕುಳಿತು ಇಡೀ ನಗರದ ಸುಂದರ ಹಸಿರನ್ನು, ಜನಜೀವನದ ಸೊಬಗನ್ನು ಕಣ್ತುಂಬಿಕೊಳ್ಳಬಹುದು. ಇಷ್ಟೇ ಅಲ್ಲದೆ ಇಲ್ಲಿ ಜೂವಾಲಾಜಿಕಲ್ ಪಾರ್ಕ್, ಪರ್ವತ ಪಟ್ಟಣ ಗ್ಯಾಂಗ್ಟಾಕ್, ಶಾಂಗೂ ಸರೋವರ ಪ್ರವಾಸಿಗರ ಪ್ರಮುಖ ಆಕರ್ಷಣೆ.