alex Certify ಕಣ್ಣ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಹಾಲಿನಿಂದ ಆರೈಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣ ಸುತ್ತಲಿನ ಕಪ್ಪು ಕಲೆ ನಿವಾರಣೆಗೆ ಹಾಲಿನಿಂದ ಆರೈಕೆ

ಡಾರ್ಕ್​ ಸರ್ಕಲ್​ ಅಥವಾ ಕಣ್ಣ ಸುತ್ತಲಿನ ಕಪ್ಪು ಕಲೆಯ ಈ ಸಮಸ್ಯೆ ಮುಖದ ಅಂದವನ್ನು ಕೆಡಿಸುತ್ತದೆ. ಸಾಮಾನ್ಯವಾಗಿ ಸರಿಯಾಗಿ ನಿದ್ದೆ ಇಲ್ಲದಿರುವುದು, ತುಂಬಾ ಹೊತ್ತು ಬಿಸಿಲಿನಲ್ಲಿರುವುದು, ಅಲರ್ಜಿ ಇವುಗಳಿಂದ ಡಾರ್ಕ್​ ಸರ್ಕಲ್​ ಉಂಟಾಗುತ್ತದೆ.

ಕಪ್ಪು ಕಲೆಯನ್ನು ಮರೆಮಾಚಲು ವಿವಿಧ ರೀತಿಯ ಕ್ರೀಂಗಳನ್ನು ಬಳಸಬಹುದು, ಆದರೆ ಅವುಗಳು ಸಂಪೂರ್ಣವಾಗಿ ಗುಣಪಡಿಸಲಾರವು. ಹಾಗಾಗಿ ಡಾರ್ಕ್​ ಸರ್ಕಲ್​ ನಿವಾರಿಸಲು ಹಾಲಿನ ಆರೈಕೆ ನೀಡಿ.

ಹಾಲು ಮತ್ತು ರೋಸ್ ​ವಾಟರ್ ​: ರೋಸ್​ ವಾಟರ್ ​ನಲ್ಲಿ ಆ್ಯಂಟಿ ಸೆಪ್ಟಿಕ್​ ಮತ್ತು ಆ್ಯಂಟಿ ಬ್ಯಾಕ್ಟಿರಿಯಲ್​ ಗುಣವಿರುವುದರಿಂದ ಕಣ್ಣ ಸುತ್ತ ಕೆಂಪಾಗುವುದು, ಊತ ಬರುವುದು ಇಂತಹ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ತಂಪಾದ ಹಾಲು ಮತ್ತು ರೋಸ್ ​ವಾಟರ್ ಅನ್ನು ಸಮ ಪ್ರಮಾಣದಲ್ಲಿ ಮಿಕ್ಸ್​ ಮಾಡಿ . ಕಾಟನ್​ ಉಂಡೆಯನ್ನು ಈ ಮಿಶ್ರಣದಲ್ಲಿ ಅದ್ದಿ 20 ನಿಮಿಷದವರೆಗೆ ಕಣ್ಣ ಮೇಲಿಡಿ. ಇದನ್ನು ವಾರಕ್ಕೆ 2-3 ಬಾರಿ ಮಾಡಿ.

ಹಾಲು ಮತ್ತು ಬಾದಾಮಿ : ಒಂದು ಮುಷ್ಠಿ ಬಾದಾಮಿಯನ್ನು ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ನೆನೆಸಿದ ಬಾದಾಮಿಯ ಪೇಸ್ಟ್​ ತಯಾರಿಸಿ. ಇದಕ್ಕೆ ಸ್ವಲ್ಪ ಹಾಲು ಸೇರಿಸಿ ಸರಿಯಾಗಿ ಮಿಕ್ಸ್ ಮಾಡಿ ಕಣ್ಣ ಸುತ್ತಲು, ಹಾಗೆ ಮುಖಕ್ಕೆ ಕೂಡ ಹಚ್ಚಿ. ಸ್ವಲ್ಪ ಸಮಯದ ನಂತರ ತಂಪಾದ ನೀರಿನಿಂದ ಮುಖ ತೊಳೆಯಿರಿ.

ಹಾಲು ಮತ್ತು ಜೇನು : ಜೇನಿನಲ್ಲಿ ತ್ವಚೆಯನ್ನು ಹೈಡ್ರೇಟ್ ಹಾಗೆ ಮಾಯಿಶ್ಚರ್​​ ಮಾಡುವ ಗುಣವಿದೆ. ಹಾಲನ್ನು ಸ್ವಲ್ಪ ಬಿಸಿ ಮಾಡಿ ಅದಕ್ಕೆ ಜೇನನ್ನು ಸೇರಿಸಿ. ಇದನ್ನು ಕಣ್ಣ ಕೆಳಗಿನ ಕಲೆಗೆ ಹಚ್ಚಿ 15 ನಿಮಿಷ ಹಾಗೆ ಬಿಡಿ, ನಂತರ ತಂಪಾದ ನೀರಿನಿಂದ ತೊಳೆಯಿರಿ. ಇದನ್ನು ವಾರಕ್ಕೆ 2-3 ಬಾರಿ ಮಾಡಿ.

ಹಾಲು, ಸವತೆಕಾಯಿ ಮತ್ತು ನಿಂಬೆ ರಸ : ಒಂದು ಚಮಚ ಹಾಲು, ಒಂದು ಚಮಚ ಸವತೆಕಾಯಿ ರಸವನ್ನು ಸೇರಿಸಿ ಕಾಟನ್​ ಬಾಲ್​ ಸಹಾಯದಿಂದ ಕಣ್ಣಿನ ಕೆಲ ಭಾಗಕ್ಕೆ ಹಚ್ಚಿ. ಇದರಿಂದ ಕಪ್ಪು ಕಲೆ ನಿವಾರಣೆಯಾಗುವುದರ ಜೊತೆಗೆ ತ್ವಚೆಗೆ ಪೋಷಣೆ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...