ಕಣ್ಣ ಕೆಳಭಾಗದಲ್ಲಿ ದಟ್ಟನೆಯ ಕಪ್ಪು ವರ್ತುಲ ಮೂಡಿ ಮೊಗದ ಸೊಬಗನ್ನು ಹಾಳು ಮಾಡುತ್ತವೆ, ಇದರಿಂದ ಮುಕ್ತಿ ಪಡೆಯುವ ಮನೆಮದ್ದುಗಳ ಬಗ್ಗೆ ತಿಳಿಯೋಣ.
ಡಾರ್ಕ್ ಸರ್ಕಲ್ ಒಂದು ಬಾರಿ ಕಣ್ಣಿನ ಕೆಳಗೆ ಕಾಣಿಸಿಕೊಂಡರೆ ಮಾಯವಾಗಲು ದೀರ್ಘ ಕಾಲ ತೆಗೆದುಕೊಳ್ಳುತ್ತದೆ. ಕೆಲಸದ ಒತ್ತಡದಿಂದಾಗಿ, ರಾತ್ರಿ ಸಮಯದಲ್ಲಿ ಸರಿಯಾಗಿ ನಿದ್ರೆ ಮಾಡದೆ ಇದ್ದರೆ, ಮಾನಸಿಕ ಒತ್ತಡವನ್ನು ಅನುಭವಿಸುತ್ತಿದ್ದರೆ ಕಣ್ಣುಗಳ ಹೊಳಪು ಮಾಯವಾಗಿ ಕಪ್ಪು ಕಲೆ ಕಾಣಿಸಿಕೊಳ್ಳುತ್ತದೆ. ಇದರಿಂದ ಮುಖವೂ ಕಳೆಗುಂದುತ್ತದೆ.
ಹಾಲಿನಲ್ಲಿ ಕಾಟನ್ ಅದ್ದಿ ಅದರಿಂದ ಕಣ್ಣುಗಳ ಮಸಾಜ್ ಮಾಡಿ. ಹತ್ತು ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಇದರಿಂದ ಕಪ್ಪು ಕಲೆಗಳು ಮಾಯವಾಗುತ್ತದೆ. ಮುಖದಲ್ಲಿ ಹೊಳಪು ಮೂಡುತ್ತದೆ. ನಾಲ್ಕು ಹನಿ ವಿಟಮಿನ್ ಇ ಎಣ್ಣೆಯನ್ನು ಕೋಲ್ಡ್ ವಾಟರ್ ನಲ್ಲಿ ಹಾಕಿ ಅದರಲ್ಲಿ ಕಾಟನ್ ಅದ್ದಿ ಅದರಿಂದ ಕಣ್ಣನ್ನು ಒರೆಸಿ.
ಸೌತೆಕಾಯಿಯನ್ನು ಕತ್ತರಿಸಿ ಕಣ್ಣಿನ ಮೇಲೆ ಇಟ್ಟು ಹತ್ತು ನಿಮಿಷಗಳ ಕಾಲ ವಿಶ್ರಾಂತಿ ತೆಗೆದುಕೊಂಡು ನಂತರ ಮುಖ ತೊಳೆದರೆ ಕಣ್ಣಿನ ಸುತ್ತ ಇರುವ ಕಪ್ಪು ವರ್ತುಲ ಮಾಯವಾಗುತ್ತದೆ.