ಮೊಬೈಲ್, ಲ್ಯಾಪ್ ಟಾಪ್ ಇಲ್ಲದೆ ಈಗ ಬದುಕೇ ಇಲ್ಲ ಎಂಬಂತಾಗಿದೆ. ವಸ್ತುಗಳ ಖರೀದಿ, ಬಿಲ್ ಪಾವತಿ, ಮಾಹಿತಿ ಶೋಧನೆ, ಕಲಿಕೆ, ಗಳಿಕೆ ಎಲ್ಲಕ್ಕೂ ಈಗ ಮೊಬೈಲ್, ಲ್ಯಾಪ್ ಟಾಪ್ ಗಳೇ ಮೂಲ ಸಾಧನ.
ದಿನನಿತ್ಯದ ಬದುಕಿನ ಅವಿಭಾಜ್ಯ ಅಂಗವಾಗಿರುವ ಈ ಸಾಧನಗಳ ಅತಿಯಾದ ಬಳಕೆಯಿಂದ ಕಣ್ಣುಗಳು ಬಹಳ ಬೇಗ ದಣಿವುಗೊಳ್ಳುತ್ತದೆ.
ಕಣ್ಣುಗಳು ದಣಿದಾಗ ಸೌತೆಕಾಯಿ ಬಿಲ್ಲೆಗಳನ್ನು ಕಣ್ಣ ಮೇಲೆ ಇಟ್ಟು ಕೆಲ ಕಾಲ ಮಲಗುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಇದಿಷ್ಟೇ ಅಲ್ಲದೆ ಮತ್ತೆ ಕೆಲವು ಉಪಾಯಗಳು ನಿಮ್ಮ ಕಣ್ಣಿನ ದಣಿವನ್ನು ಕಡಿಮೆ ಮಾಡಬಹುದು.
ಶುಭ್ರವಾದ ಹತ್ತಿಯನ್ನು ಬಿಲ್ಲೆಯ ಹಾಗೆ ( ಕಾಯಿನ್ ರೀತಿ ) ಮಾಡಿಕೊಂಡು ರೋಸ್ ವಾಟರ್ ನಲ್ಲಿ ಅದ್ದಿ ಕಣ್ಣು ಮುಚ್ಚಿ ರೆಪ್ಪೆಯ ಮೇಲೆ ಇಟ್ಟುಕೊಂಡರೆ ಕಣ್ಣಿನ ಉರಿ, ದಣಿವು ಶಮನವಾಗುತ್ತದೆ.
ಇದೇ ರೀತಿಯಾಗಿ ಹತ್ತಿಯ ಬಿಲ್ಲೆಗಳನ್ನು ಶುದ್ಧವಾದ ಹರಳೆಣ್ಣೆಯಲ್ಲಿ ಅದ್ದಿ ಕಣ್ಣಿನ ರೆಪ್ಪೆಯ ಮೇಲೆ ಇಟ್ಟುಕೊಂಡು ಕೆಲಕಾಲ ವಿಶ್ರಾಂತಿ ಪಡೆದುಕೊಂಡರೆ ಕಣ್ಣಿನ ಆಯಾಸ ಕಳೆದು ಹಿತವಾದ ನಿದ್ರೆಗೆ ಜಾರಬಹುದು.