ಕಣ್ಣಿನ ರೆಪ್ಪೆಗಳು ಧೂಳಿನಿಂದ ಕಣ್ಣಿನ ರಕ್ಷಣೆ ಮಾಡುವುದಲ್ಲದೇ ಹೆಣ್ಣು ಮಕ್ಕಳ ಕಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೆಲವರಿಗೆ ಕಣ್ಣಿನ ರೆಪ್ಪೆಗಳು ಕಮ್ಮಿ ಇರುತ್ತದೆ ಮತ್ತೆ ಕೆಲವರಿಗೆ ಉದುರಿ ಹೋಗಿರುತ್ತದೆ.
ಕಣ್ಣಿನ ರೆಪ್ಪೆಗಳನ್ನು ದಪ್ಪವಾಗಿ ಹಾಗೂ ಆಕರ್ಷಕವಾಗಿ ಬೆಳೆಯುವಂತೆ ಮಾಡಲು ಇಲ್ಲಿವೆ ಕೆಲ ಮನೆ ಮದ್ದುಗಳು.
* ಸ್ವಲ್ಪ ಹರಳೆಣ್ಣೆ ಮತ್ತು ಸ್ವಲ್ಪ ಅಲೋವೆರಾ ಜೆಲ್ ತೆಗೆದುಕೊಂಡು ಅದನ್ನು ಒಂದು ಹತ್ತಿ ಬಟ್ಟೆಯ ಸಹಾಯದಿಂದ ಕಣ್ಣಿನ ರೆಪ್ಪೆಗಳ ಮೇಲೆ ಮಸಾಜ್ ಮಾಡಿಕೊಳ್ಳಿ. ಇದು ಕಣ್ಣಿನ ರೆಪ್ಪೆ ಉದುರುವುದನ್ನು ತಡೆಯುವುದರ ಜೊತೆಗೆ ಬೆಳವಣಿಗೆಗೆ ಸಹಾಯ ಮಾಡುತ್ತದೆ.
* ದಿನ ಮಲಗುವ ಮುನ್ನ ಲೋಳೆಸರವನ್ನು ಕಣ್ಣಿನ ರೆಪ್ಪೆಗಳ ಮೇಲೆ ಹಚ್ಚಿಕೊಂಡು ಮಲಗಬೇಕು. ನಂತರ ಬೆಳಗ್ಗೆ ತಣ್ಣಗಿನ ನೀರಿನಿಂದ ತೊಳೆದುಕೊಳ್ಳಬೇಕು. ಇದರಿಂದ ಕಣ್ಣಿನ ರೆಪ್ಪೆಗಳು ಬಲು ಬೇಗ ಬೆಳೆಯುತ್ತದೆ.
* ವಿಟಮಿನ್ ಇ ಅಧಿಕ ಇರುವಂತ ಆಹಾರ ತಿನ್ನುವುದರಿಂದ ಕಣ್ಣಿನ ರೆಪ್ಪೆಗಳು ಚೆನ್ನಾಗಿ ಬೆಳೆಯುತ್ತದೆ.