alex Certify ಕಣ್ಣಿನ ಬಣ್ಣ ಹೇಳುತ್ತೆ ನಿಮ್ಮ ಸ್ವಭಾವ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಿನ ಬಣ್ಣ ಹೇಳುತ್ತೆ ನಿಮ್ಮ ಸ್ವಭಾವ

ಪ್ರಪಂಚದಲ್ಲಿರುವ ಮನುಷ್ಯರ ಕಣ್ಣುಗಳು ವಿಭಿನ್ನ ಬಣ್ಣಗಳನ್ನು ಹೊಂದಿರುತ್ತವೆ.  ಸಮುದ್ರಶಾಸ್ತ್ರದ ಪ್ರಕಾರ, ಕಣ್ಣುಗಳ ಬಣ್ಣವು ಮಾನವ ಸ್ವಭಾವದೊಂದಿಗೆ ನಿಕಟ ಸಂಬಂಧ ಹೊಂದಿದೆ. ಕಣ್ಣುಗಳ ಬಣ್ಣದಿಂದ ಯಾವುದೇ ವ್ಯಕ್ತಿಯ ವ್ಯಕ್ತಿತ್ವದ ಬಗ್ಗೆ ನೀವು ಸುಲಭವಾಗಿ ತಿಳಿದುಕೊಳ್ಳಬಹುದು.

ಕಂದು ಬಣ್ಣದ ಕಣ್ಣನ್ನು ಹೊಂದಿರುವ ಜನರ ಮೆದುಳು ತುಂಬಾ ವೇಗವಾಗಿ ಕೆಲಸ ಮಾಡುತ್ತದೆ. ಈ ಜನರಿಗೆ ಸಂಬಂಧಗಳನ್ನು ಹೇಗೆ ಗೌರವಿಸಬೇಕೆಂಬುದು ತಿಳಿದಿರುತ್ತದೆ. ಈ ಜನರು ಯಾರನ್ನಾದರೂ ತಮ್ಮತ್ತ ಆಕರ್ಷಿಸುತ್ತಾರೆ. ಸದಾ ಬೇರೆಯವರ ನೆರವಿಗೆ ನಿಲ್ಲುತ್ತಾರೆ.

ಬೂದು ಬಣ್ಣದ ಕಣ್ಣುಗಳನ್ನು ಹೊಂದಿರುವ ಜನರು ಯಾವುದೇ ಕೆಲಸವನ್ನು ಷರತ್ತಾಗಿ ಸ್ವೀಕರಿಸಿ ಮಾಡ್ತಾರೆ. ಈ ಜನರ ಹೃದಯ ಶುದ್ಧವಾಗಿರುತ್ತದೆ. ಸುಳ್ಳು ಹೇಳುವುದು ಇವರಿಗೆ ಇಷ್ಟವಿಲ್ಲ.

ನೀಲಿ ಬಣ್ಣದ ಕಣ್ಣಿನವರು ಮುಂದಿರುವವರನ್ನು ಬೇಗ ಆಕರ್ಷಿಸುತ್ತಾರೆ. ಬಹಳ ಬೇಗ ಹೆಸರು ಗಳಿಸುತ್ತಾರೆ. ಖ್ಯಾತಿ ಪಡೆಯುತ್ತಾರೆ.

ಕಪ್ಪು ಕಣ್ಣುಗಳಿರುವ ಜನರು ತಮ್ಮ ರಹಸ್ಯವನ್ನು ಮರೆಮಾಚುತ್ತಾರೆ. ಅವರನ್ನು ನಂಬುವುದು ಕಷ್ಟ. ಪ್ರದರ್ಶನವನ್ನು ಇಷ್ಟಪಡುವುದಿಲ್ಲ. ಮೋಸದಿಂದ ದೂರವಿರುತ್ತಾರೆ. ಅವರ ಸಿಕ್ಸ್ ಸೆನ್ಸ್ ಅತ್ಯುತ್ತಮವಾಗಿರುತ್ತದೆ.

ಹಸಿರು ಕಣ್ಣು ಹೊಂದಿರುವ ಜನರ ಹೆಚ್ಚು ಸ್ಪರ್ಧಾತ್ಮಕವಾಗಿರುತ್ತಾರೆ. ಸೃಜನಶೀಲರು, ನಾಚಿಕೆ ಸ್ವಭಾವದವರು ಆಗಿರುತ್ತಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...