ಕಣ್ಣಿನ ಉರಿ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತದೆ.
ತುಂಬಾ ಸಮಯ ಕಂಪ್ಯೂಟರ್ ವೀಕ್ಷಣೆ, ಕಡಿಮೆ ನಿದ್ರೆ, ಮಿತಿಮೀರಿದ ನಿದ್ರೆ ಇವೆಲ್ಲವೂ ಕಣ್ಣಿನ ಉರಿಗೆ ಕಾರಣವಾಗುತ್ತದೆ. ಕಣ್ಣಿನ ಉರಿಯನ್ನು ಮನೆಯಲ್ಲಿಯೇ ಕಡಿಮೆ ಮಾಡಬಹುದು.
ಒಂದು ಹತ್ತಿ ಬಟ್ಟೆಯೊಳಗೆ ಐಸ್ ಹಾಕಿ ಅದನ್ನು ಕಟ್ಟಿ. ಕಣ್ಣಿನ ಸುತ್ತಮುತ್ತ ಸ್ವಲ್ಪ ಸಮಯ ಐಸ್ ಇರುವ ಬಟ್ಟೆಯನ್ನಿಟ್ಟು ಮೆದುವಾಗಿ ಒತ್ತಿ.
ಕಣ್ಣುಗಳನ್ನು ತಣ್ಣಗಿನ ನೀರಿನಲ್ಲಿ ಆಗಾಗ ತೊಳೆಯುತ್ತಿರಿ. ಇದ್ರಿಂದಲೂ ಕಣ್ಣಿನ ಉರಿ ಕಡಿಮೆಯಾಗುತ್ತದೆ.
ಸೌತೆಕಾಯಿ ಹೋಳುಗಳನ್ನು ಸ್ವಲ್ಪ ಸಮಯದವರೆಗೆ ಕಣ್ಣುಗಳ ಮೇಲೆ ಇರಿಸಿ. ಇದನ್ನು ಮಾಡುವುದರಿಂದ ಕಣ್ಣುಗಳು ತಂಪಾಗಿರುತ್ತವೆ.
ಟೀ ಬ್ಯಾಗ್‌ಗಳ ಸಹಾಯದಿಂದ ಕಣ್ಣಿನ ಉರಿ ಕಡಿಮೆ ಮಾಡಬಹುದು. ಬಿಸಿ ನೀರಿಗೆ ಟೀ ಬ್ಯಾಗ್ ಹಾಕಿ. ನೀರು ತಣ್ಣಗಾದ ಮೇಲೆ ಟೀ ಬ್ಯಾಗನ್ನು ಕಣ್ಣಿನ ಮೇಲೆ ಇಟ್ಟುಕೊಳ್ಳಿ.
ರಾತ್ರಿಯಲ್ಲಿ ಮಲಗುವ ಮೊದಲು ಹತ್ತಿಯನ್ನು ಹಾಲಿನಲ್ಲಿ ಅದ್ದಿ 10-15 ನಿಮಿಷ ಕಣ್ಣಿನ ಮೇಲೆ ಇಟ್ಟುಕೊಳ್ಳಿ. ಬೆಳಿಗ್ಗೆ ಕಣ್ಣಿನ ಉರಿ ಕಡಿಮೆಯಾಗಿರುತ್ತದೆ.
ಇದ್ಯಾವುದ್ರಿಂದಲೂ ಕಣ್ಣಿನ ಉರಿ ಕಡಿಮೆಯಾಗಿಲ್ಲವೆಂದಾದಲ್ಲಿ ವೈದ್ಯರನ್ನು ಭೇಟಿಯಾಗಿ.