ನಮ್ಮ ಕಣ್ಣುಗಳು ಸೂಕ್ಷ್ಮವಾಗಿರುತ್ತವೆ. ಕಣ್ಣುಗಳ ವಿಶೇಷ ಆರೈಕೆ ಅಗತ್ಯವಿರುತ್ತದೆ. ಕಣ್ಣಿನ ಬಗ್ಗೆ ಒಂದು ಸಣ್ಣ ಉದಾಸೀನತೆ ಕೂಡ ದೊಡ್ಡ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ.
ಪರಿಸರ ಮಾಲಿನ್ಯ, ಕಾಂಟೆಕ್ಟ್ ಲೆನ್ಸ್ ಉಪಯೋಗ, ಕಡಿಮೆ ನಿದ್ರೆ, ತುಂಬಾ ಹೊತ್ತು ಟಿವಿ, ಕಂಪ್ಯೂಟರ್, ಮೊಬೈಲ್ ನೋಡುತ್ತಿರುವುದು, ಕಿರಿಕಿರಿ, ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗ, ಹೆಚ್ಚಿನ ಪ್ರಮಾಣದಲ್ಲಿ ಮಾತ್ರೆ ಸೇವನೆ ಇವೆಲ್ಲವೂ ಕಣ್ಣಿನ ಸಮಸ್ಯೆಗೆ ಕಾರಣವಾಗುತ್ತದೆ. ಕಣ್ಣಿನ ಉರಿ, ತುರಿಕೆ, ಸೋಂಕು ಕಾಡುತ್ತದೆ.
ಇದು ಕೆಲಸದ ಮೇಲೊಂದೇ ಅಲ್ಲ ಸೌಂದರ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಎಲ್ಲ ಕಣ್ಣಿನ ಸಮಸ್ಯೆಗೆ ಯೋಗ ಮದ್ದು. ಯೋಗದಿಂದ ಕಣ್ಣಿನ ಸಮಸ್ಯೆ ದೂರವಾಗುವ ಜೊತೆಗೆ ಕಣ್ಣು ಹೊಳಪು ಪಡೆಯಲು ನೆರವಾಗುತ್ತದೆ. ಈ ಕೆಳಗೆ ನೀಡಿರುವ ಯೋಗದ ವಿಡಿಯೋ ನೋಡಿ ಪ್ರತಿ ದಿನ ಯೋಗಾಭ್ಯಾಸ ಮಾಡಿದ್ರೆ ಕಣ್ಣಿನ ಸಮಸ್ಯೆ ಕಡಿಮೆಯಾಗುತ್ತದೆ.