ಕಣ್ಣು ಮನುಷ್ಯನ ಪ್ರಧಾನ ಅಂಗ. ಈ ನಿಟ್ಟಿನಲ್ಲಿ ವಯಸ್ಸಾಗುತ್ತಿದ್ದಂತೆ ಕಣ್ಣಿನ ಶಕ್ತಿಯಲ್ಲಿ ಕುಂಠಿತವಾಗಬಹುದು. ಇಂತಹ ಸಮಸ್ಯೆಗಳು ನಿಮ್ಮ ಬಳಿ ಬರಬಾರದು ಅಂದ್ರೆ ಕೆಲವೊಂದು ಆಹಾರ ಸೇವನೆಯನ್ನು ನೀವು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಕಣ್ಣಿನ ಆರೋಗ್ಯ ಕಾಪಾಡಲು ಯಾವೆಲ್ಲಾ ಆಹಾರ ನೆರವಾಗುತ್ತದೆ ಬನ್ನಿ ನೋಡೋಣ.
ಸಿಹಿ ಗೆಣಸು : ಸಿಹಿ ಗೆಣಸಿನಲ್ಲಿರುವ ಬೀಟಾ ಕೆರೊಟೀನ್ ಅನ್ನು ನಿಮ್ಮ ದೇಹ ವಿಟಮಿನ್ ಎ ಅಂಶವಾಗಿ ಪರಿವರ್ತಿಸುತ್ತದೆ. ಇದು ಡ್ರೈ ಐಸ್, ಇರುಳುಗುರುಡನ್ನು ತಡೆಯುತ್ತದೆ. ಗೆಣಸು ಇಷ್ಟವಾಗದಿದ್ದರೆ ಕ್ಯಾರೆಟ್, ಪಾಲಕ್, ಹಾಲು ಹೆಚ್ಚಾಗಿ ಸೇವಿಸಿ. ವಿಟಮಿನ್ ಎ ಅಂಶವಿರುವ ಆಹಾರವು ದೀರ್ಘಕಾಲದವರೆಗೆ ಕಣ್ಣಿನ ಸಮಸ್ಯೆ ಬಾರದಂತೆ ತಡೆಯುತ್ತದೆ.
ಸ್ಟ್ರಾಬೆರ್ರೀಸ್ : ಸ್ಟ್ರಾಬೆರ್ರಿಗಳು ನಿಮ್ಮ ಕಣ್ಣಿನ ಆರೋಗ್ಯಕ್ಕೆ ಪೂರಕ. ಇದರಲ್ಲಿರುವ ವಿಟಮಿನ್ ಸಿ ಅಂಶವು ಕ್ಯಾಟರಕ್ಟ್ ಆಗದಂತೆ ತಡೆಯುತ್ತದೆ. ಆದ್ದರಿಂದ ಹೆಚ್ಚೆಚ್ಚು ವಿಟಮಿನ್ ಸಿ ಆಹಾರವನ್ನು ಬಹಳ ಸೇವಿಸಿ. ಬ್ರೊಕೋಲಿ, ಕಿತ್ತಳೆ, ದ್ರಾಕ್ಷಿ, ಮಾವಿನ ಹಣ್ಣನ್ನು ಸೇವಿಸಿ. ನಿಮ್ಮ ಕಣ್ಣಿನಲ್ಲಿ ದರ್ಮಾಂಸ ಬೆಳೆಯುವುದನ್ನು ನಿಯಂತ್ರಿಸುತ್ತದೆ.
ಆರೋಗ್ಯಕರ ಕೊಬ್ಬು ಹೊಂದಿರುವ ಆಹಾರ: ಓಮೆಗಾ 3 ಅಂಶವನ್ನು ಹೊಂದಿರುವ ಆಹಾರ. ವಾಲ್ನಟ್, ಅಗಸೇಬೀಜ, ಚಿಯಾ ಸೀಡ್ಸ್, ಸೂರ್ಯಕಾಂತಿ ಬೀಜ ಸೇವನೆ ಪ್ರಯೋಜನಕಾರಿ. ಅಲ್ಲದೇ ಹೇರಳವಾದ ವಿಟಮಿನ್ ಸಿ ಅಂಶವನ್ನು ಹೊಂದಿದೆ.
ಬೀನ್ಸ್ : ಸತುವಿನ ಅಂಶ ಹೇರಳವಾಗಿರುವ ಚಿಕ್ಪಿಯಾ, ಕಪ್ಪು ಅಲಸಂದೆ, ಕಿಡ್ನಿ ಬೀನ್ಸ್ ಸೇವನೆಯೂ ಕಣ್ಣಿನ ಆರೋಗ್ಯಕ್ಕೆ ಪ್ರಯೋಜನಕಾರಿ.