ಕ್ಯಾರೆಟ್ ಗಳನ್ನು ಹೆಚ್ಚಾಗಿ ಸೇವಿಸುವವರ ರಕ್ತದಲ್ಲಿ ಆಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿ ಇರುವುದರಿಂದ ಹೃದಯಬೇನೆ, ಕ್ಯಾನ್ಸರ್, ಕಣ್ಣು ಸಂಬಂಧಿತ ವ್ಯಾದಿಗಳು, ಅಸ್ತಮ ಮುಂತಾದ ಸಮಸ್ಯೆಗಳು ಕಾಡುವ ಸಾಧ್ಯತೆ ಕಡಿಮೆ. ಜೊತೆಗೆ ಇನ್ನಷ್ಟು ಪ್ರಯೋಜನಗಳನ್ನು ಪಡೆಯಬಹುದು.
* ಕ್ಯಾರೆಟ್ ನ್ನು ಹೆಚ್ಚಾಗಿ ಸೇವಿಸುವವರಲ್ಲಿ ಶ್ವಾಸಕೋಶಗಳ ಕ್ಯಾನ್ಸರ್ ಬರುವ ಅವಕಾಶ ಕಡಿಮೆ.
* ಡಯೇರಿಯಾಗೆ ಕ್ಯಾರೆಟ್ ಸೂಪ್ ಬೆಸ್ಟ್ ಮೆಡಿಸಿನ್. ಇದು ಬ್ಯಾಕ್ಟೀರಿಯಾವನ್ನು ನಿಯಂತ್ರಿಸುವುದರೊಂದಿಗೆ ವಾಂತಿ ಆಗದಿರುವ ಹಾಗೆ ಮಾಡುತ್ತದೆ.
* ಮಕ್ಕಳಲ್ಲಿ ಹೊಟ್ಟೆ ಹುಳುಗಳ ನಿವಾರಣೆಗೆ ಕ್ಯಾರೆಟ್ ಬೆಸ್ಟ್. ಮಕ್ಕಳಿಗೆ ಒಂದು ಕಪ್ಪು ತುರಿದಿರುವ ಕ್ಯಾರೆಟನ್ನು ಹಸಿ ಹೊಟ್ಟೆಯಲ್ಲಿ ಕೊಟ್ಟು ಮತ್ತೇನು ಕೊಡದಿದ್ದರೆ ಹೊಟ್ಟೆ ಶುಭ್ರವಾಗುತ್ತದೆ.
* ಹಸಿ ಕ್ಯಾರೆಟ್ ಸಂತಾನ ಸಾಫಲ್ಯತೆಗೆ ಸಹಾಯಕಾರಿ.
* ವೃದ್ಧರಲ್ಲಿ ಇವು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬ್ರಾಂಕೈಟಿಸ್, ಅನೀಮಿಯಾದೊಂದಿಗೆ ಹೋರಾಡುತ್ತದೆ.
* ಬಿಪಿಯನ್ನು ನಿಯಂತ್ರಿಸುತ್ತದೆ. ಪಿತ್ತಕೋಶದ ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ.
* ಮುಖ್ಯವಾಗಿ ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.