ಕಣ್ಣಿಗೆ ಎಲ್ಲವನ್ನೂ ಹೇಳುವ ಶಕ್ತಿಯಿದೆ. ಮುಖದ ಸೌಂದರ್ಯ ಹೆಚ್ಚಿಸುವ ಕೆಲಸವನ್ನು ಕಣ್ಣು ಮಾಡುತ್ತದೆ. ಕಣ್ಣುಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಕಾಜಲ್(ಕಾಡಿಗೆ) ಪ್ರಮುಖ ಪಾತ್ರ ವಹಿಸುತ್ತದೆ. ಇದರಿಂದ ಕಣ್ಣುಗಳು ದೊಡ್ಡದಾಗಿ ಮತ್ತು ಆಕರ್ಷಕವಾಗಿ ಕಾಣುತ್ತವೆ.
ಮಾರುಕಟ್ಟೆಯಲ್ಲಿ ಅನೇಕ ರೀತಿ ಕಾಜಲ್ ಗಳು ಲಭ್ಯವಿದೆ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಕಾಜಲ್ ಕಣ್ಣಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಕಾಜಲ್ ಹೆಚ್ಚು ಒಳ್ಳೆಯದು. ಹಾಗಾಗಿ ನೀವೇ ಮನೆಯಲ್ಲಿ ಕಾಜಲ್ ತಯಾರಿಸಿಕೊಳ್ಳಿ.
ಕಾಜಲ್ ಮಾಡಲು ಬೇಕಾಗುವ ಸಾಮಗ್ರಿಗಳು:
ಬಾದಾಮಿ – 5
ಅಲೋವೇರಾ ಜೆಲ್ – 3ಚಮಚ
ತೆಂಗಿನ ಎಣ್ಣೆ – 3 ಚಮಚ
ಪ್ಲೇಟ್ ಅಥವಾ ಸೆರಾಮಿಕ್ ಬೌಲ್
ಮಾಡುವ ವಿಧಾನ: ಮೊದಲ ಕೆಲವು ಬಾದಾಮಿಗಳನ್ನು ತೆಗೆದುಕೊಂಡು ಪ್ಲೇಟ್ ಅಥವಾ ಸೆರಾಮಿಕ್ ಬೌಲ್ ನಲ್ಲಿರಿಸಿ. ಕನಿಷ್ಟ 10 ನಿಮಿಷಗಳ ಕಾಲ ಬಾದಾಮಿಗಳನ್ನು ಫ್ರೈ ಮಾಡಿ. ನಂತರ ಬಾದಾಮಿಯನ್ನು ಚೆನ್ನಾಗಿ ಪುಡಿಮಾಡಿ ಅದಕ್ಕೆ ಅಲೋವೆರಾ ಜೆಲ್ ಮತ್ತು 3 ಚಮಚ ತೆಂಗಿನೆಣ್ಣೆ ಹಾಕಿ ಚೆನ್ನಾಗಿ ಮಿಕ್ಸ ಮಾಡಿ. ನೈಸರ್ಗಿಕ ಕಾಡಿಗೆ ಸಿದ್ಧವಾಗಿದ್ದು, ಈ ಮಿಶ್ರಣವನ್ನು ಗಾಳಿಯಾಡದ ಗಾಜಿನ ಬಾಟಲಿಯಲ್ಲಿ ಶೇಖರಿಸಿಡಿ. ಅಗತ್ಯವಿರುವಾಗ ಬಳಸಿ.