ಇಂಟರ್ನೆಟ್ ಮೂಲಕ ಸಾಕಷ್ಟು ಸ್ಪೂರ್ತಿದಾಯಕ ಘಟನೆಗಳು, ನಿದರ್ಶನಗಳು ಜನರನ್ನು ತಲುಪುತ್ತಿವೆ. ಕಠಿಣ ಪರಿಶ್ರಮವನ್ನು ಬಿಂಬಿಸುವ ಘಟನೆಯೊಂದು ಈಗ ವೈರಲ್ ಆಗಿದೆ. ಝೊಮೆಟೊ ಡೆಲಿವರಿ ಏಜೆಂಟ್ ಒಬ್ಬನಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ. ಆತ ಅವರಿಬ್ಬರನ್ನೂ ಜೊತೆಗೆ ಕರೆದುಕೊಂಡೇ ಮನೆಮನೆಗೆ ಫುಡ್ ಡೆಲಿವರಿ ಮಾಡ್ತಾನೆ.
ಹೆಣ್ಣು ಮಗುವನ್ನು ಬೇಬಿ ಕ್ಯಾರಿಯರ್ನಲ್ಲಿ ಹೊತ್ತೊಯ್ಯುತ್ತಾನೆ. ಮಗನನ್ನೂ ಜೊತೆಗೆ ಕರೆದುಕೊಂಡು ಝೊಮೆಟೋ ಫುಡ್ ಆರ್ಡರ್ಗಳನ್ನು ಗ್ರಾಹಕರಿಗೆ ತಲುಪಿಸುತ್ತಾನೆ. ಮಗ, ತಂದೆಗೆ ಫುಡ್ ಡೆಲಿವರಿ ಮಾಡಲು ಸಹಾಯ ಮಾಡ್ತಾನಂತೆ. ಫುಡ್ ವ್ಲಾಗರ್ ಒಬ್ಬರು ಈ ವಿಡಿಯೋವನ್ನು Instagramನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಈಗಾಗ್ಲೇ ವೈರಲ್ ಆಗಿದೆ. ಅನೇಕರು ತಂದೆ, ಮಕ್ಕಳ ಮೇಲಿಟ್ಟಿರುವ ಪ್ರೀತಿ ಮತ್ತವನ ಪರಿಶ್ರಮವನ್ನು ಶ್ಲಾಘಿಸಿದ್ದಾರೆ. ಕೆಲವರು ಸ್ಪೂರ್ತಿದಾಯಕ ಎಂದು ಕರೆದರೆ, ಇನ್ನು ಕೆಲವರು ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಮಕ್ಕಳು ಮತ್ತು ಕುಟುಂಬವನ್ನು ಪೋಷಿಸಲು ಕಷ್ಟಪಡುತ್ತಿರುವ ಆತನಿಗೆ ಸರ್ಕಾರ ಉದ್ಯೋಗ ಒದಗಿಸಬೇಕು ಇಲ್ಲವಾದಲ್ಲಿ ಸೆಲೆಬ್ರಿಟಿಗಳು ಸಹಾಯ ಮಾಡಬೇಕೆಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಈ ವಿಡಿಯೋಗೆ ಝೊಮೆಟೋ ಕೂಡ ಪ್ರತಿಕ್ರಿಯಿಸಿದೆ. ಆತನ ಸಂಪರ್ಕ ವಿವರಗಳನ್ನು ಖಾಸಗಿ ಸಂದೇಶದಲ್ಲಿ ಹಂಚಿಕೊಳ್ಳುವಂತೆ ಮನವಿ ಮಾಡಿದೆ.
https://youtu.be/toueDuWoXAo