ಪೂರಿ ತಿನ್ನುವ ಆಸೆ ಇದೆ. ಆದ್ರೆ ಅದ್ರಲ್ಲಿರುವ ಎಣ್ಣೆ ಭಯಕ್ಕೆ ಪೂರಿ ತಿನ್ನೋದನ್ನು ಬಿಟ್ಟುಬಿಟ್ಟಿದ್ದೇನೆ ಎನ್ನುವವರಿದ್ದಾರೆ. ಇನ್ಮುಂದೆ ಪೂರಿ ತಿನ್ನಲು ಭಯಪಡಬೇಕಾಗಿಲ್ಲ. ಕಡಿಮೆ ಎಣ್ಣೆಯಲ್ಲಿ ಪೂರಿ ತಯಾರಿಸುವ ಟಿಪ್ಸ್ ಇಲ್ಲಿದೆ.
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿದ ನಂತ್ರ ಲಟ್ಟಣಿಸಿದ ಪೂರಿ ಹಾಕುವ ಮೊದಲು ಚಿಟಕಿ ಉಪ್ಪನ್ನು ಎಣ್ಣೆಗೆ ಹಾಕಿ. ಹೀಗೆ ಮಾಡಿದಲ್ಲಿ ಪೂರಿ ಹೆಚ್ಚಿನ ಪ್ರಮಾಣದಲ್ಲಿ ಎಣ್ಣೆಯನ್ನು ಹೀರಿಕೊಳ್ಳುವುದಿಲ್ಲ.
ಲಟ್ಟಿಸಿದ ಪೂರಿಯನ್ನು ಒಂದು ಪ್ಲೇಟ್ ನಲ್ಲಿ ಹಾಕಿ ಅದನ್ನು 10 ನಿಮಿಷಗಳ ಕಾಲ ಫ್ರೀಜರ್ ನಲ್ಲಿಡಿ. ನಂತ್ರ ಎಣ್ಣೆಯಲ್ಲಿ ಕರಿಯುವುದರಿಂದ ಕಡಿಮೆ ಎಣ್ಣೆ ಸಾಕಾಗುತ್ತದೆ. ಈ ರೀತಿ ಮಾಡಿದ ಪೂರಿಗಳು ಅನೇಕ ಸಮಯ ಕ್ರಿಸ್ಪಿಯಾಗಿರುತ್ತವೆ.