
ಸ್ಕ್ವಿಡ್ ಜೀವಿಯು ಮೂರು ಮೀಟರ್ (10 ಅಡಿ) ಗಿಂತ ಹೆಚ್ಚು ಉದ್ದವಾಗಿದೆ ಮತ್ತು ಅಂದಾಜು 80 ಕೆ.ಜಿ.ಯಷ್ಟು ತೂಕ ಹೊಂದಿದೆ. ದೈತ್ಯ ಸ್ಕ್ವಿಡ್‌ಗಳು ಆಳವಾದ ಸಮುದ್ರದಲ್ಲಿ ವಾಸಿಸುತ್ತವೆ. ಹೀಗಾಗಿ ಜೀವಂತವಾಗಿ ಈ ಜೀವಿ ಸಮುದ್ರ ತೀರಕ್ಕೆ ಅಪ್ಪಳಿಸಿರುವುದು ನಂಬಲು ಅಸಾಧ್ಯವಾಗಿದೆ.
ಸಮುದ್ರ ತೀರದಲ್ಲಿ ಸ್ಕ್ವಿಡ್ ಕಂಡುಬಂದಾಗ ಇನ್ನೂ ಜೀವಂತವಾಗಿತ್ತು. ಸೆಫಲೋಪಾಡ್ ಅನ್ನು ಈಗ ಸಕೈಯಲ್ಲಿನ ಎಚಿಜೆನ್ ಮತ್ಸುಶಿಮಾ ಅಕ್ವೇರಿಯಂಗೆ ಸ್ಥಳಾಂತರಿಸಲಾಗಿದೆ. ಆಳವಾದ ನೀರಿನ ಅಡಿಯಲ್ಲಿ ವಾಸಿಸುವ ದೈತ್ಯ ಸ್ಕ್ವಿಡ್ ಗಳು ಹೆಚ್ಚಾಗಿ ಅಸ್ಪಷ್ಟವಾಗಿರುತ್ತವೆ. ಇವುಗಳು 13 ಮೀಟರ್ ಉದ್ದದವರೆಗೆ ಬೆಳೆಯಬಹುದು. ಆದರೆ, ಇವುಗಳ ಜೀವಿತಾವಧಿ ಮಾತ್ರ ಬಹಳ ಚಿಕ್ಕದಾಗಿದೆ. ಸಂಶೋಧಕರ ಪ್ರಕಾರ, ಈ ಜೀವಿಯು ಐದರಿಂದ ಆರು ವರ್ಷಗಳವರೆಗೆ ಮಾತ್ರ ಬದುಕಬಲ್ಲದು. ಇದರ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಳ್ಳಲಾಗಿದ್ದು, ಸದ್ಯ ಭಾರಿ ವೈರಲ್ ಆಗಿದೆ.