ಮಳೆಗಾಲದಲ್ಲಿ ಆರೋಗ್ಯವೂ ಪದೇ ಪದೇ ಕೈಕೊಡುತ್ತದೆ. ಗಾಳಿಗೆ ದೇಹದ ಚರ್ಮವೆಲ್ಲ ಒರಟಾಗಿ ಮನುಷ್ಯನಲ್ಲಿ ಲವಲವಿಕೆಯೇ ಇಲ್ಲದಂತೆ ಮಾಡುತ್ತದೆ. ಈ ಋತುವಿನಲ್ಲಿ ದೇಹವನ್ನು ಬೆಚ್ಚಗಿರಿಸುವ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲವು ವಿಷಯಗಳನ್ನು ನಾವು ತಿಳಿಯೋಣ.
ಬೆಲ್ಲ ಮತ್ತು ಕಡಲೆಯಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದರ ಸೇವನೆಯಿಂದ ರಕ್ತ ಹೀನತೆ ತಪ್ಪಿಸಬಹುದು. ಹುರಿದ ಕಡಲೆಯಲ್ಲಿ ಕಬ್ಬಿಣಾಂಶದ ಜೊತೆಗೆ ಪ್ರೊಟೀನ್ ಕೂಡ ಇರುವುದರಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಿಸುತ್ತದೆ.
ನಮ್ಮ ದೇಹದಲ್ಲಿ ಆಯಾಸ ಮತ್ತು ದೌರ್ಬಲ್ಯ ಕಂಡುಬಂದಾಗ ಕಬ್ಬಿಣಾಂಶ ಭರಿತ ಆಹಾರಗಳನ್ನು ತೆಗೆದುಕೊಳ್ಳಬೇಕು ಎಂಬ ಸಲಹೆಗಳನ್ನು ವೈದ್ಯರು ನೀಡುತ್ತಾರೆ. ಕಡಲೆ ಮತ್ತು ಬೆಲ್ಲದ ಸೇವನೆ ನಮ್ಮನ್ನು ರಕ್ತ ಹೀನತೆಯಿಂದ ರಕ್ಷಿಸುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತದೆ.