ಕಡಲೆಕಾಯಿ ಬಡವರ ಬಾದಾಮಿ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಅದು ನಿಜ. ಬಾದಾಮಿಯಂತೆ ಕಡಲೆಕಾಯಿಯನ್ನೂ ಹಿಂದಿನ ರಾತ್ರಿ ನೆನೆಸಿಟ್ಟು ಮರುದಿನ ಬೆಳಗೆದ್ದು ಇದನ್ನು ಸೇವಿಸುವುದರಿಂದ ಬಾದಾಮಿಯಷ್ಟೇ ಪೋಷಕಾಂಶಗಳು ನಿಮ್ಮ ದೇಹಕ್ಕೆ ಸಿಗುತ್ತವೆ.
ಬಾದಾಮಿಗೆ ಹೋಲಿಸಿದರೆ ಕಡಲೆಕಾಯಿ ಅಗ್ಗವೂ ಹೌದು. ಇದರಲ್ಲಿ ಗೋಡಂಬಿ ಹಾಗೂ ಬಾದಾಮಿಯಲ್ಲಿರುವ ಪೋಷಕಾಂಶಗಳು ಇವೆ. ಇವು ಕೊಲೆಸ್ಟ್ರಾಲ್ ನಿಯಂತ್ರಣ ಮಾಡುತ್ತವೆ. ತೂಕ ಕಡಿಮೆ ಮಾಡಿ ಜೀರ್ಣಕ್ರಿಯೆ ಸುಧಾರಿಸುತ್ತದೆ.
ಸ್ನಾಯುಗಳನ್ನು ಬಲಗೊಳಿಸುವ ಇವು ಮಾಂಸಖಂಡಗಳನ್ನು ಗಟ್ಟಿಗೊಳಿಸುತ್ತದೆ. ನಿತ್ಯ ವ್ಯಾಯಾಮ ಮಾಡುವವರು ಇದನ್ನು ಕಡ್ಡಾಯವಾಗಿ ಸೇವಿಸಬೇಕು. ತೂಕ ಇಳಿಸಲು ಬಯಸುವವರು ಮೊಳಕೆ ಬಂದ ಹೆಸರಿನೊಂದಿಗೆ ನೆನೆಸಿಟ್ಟ ಕಡಲೆಕಾಯಿ ತಿನ್ನಿ. ಇದರಿಂದ ಹೆಚ್ಚು ಹೊತ್ತು ಹಸಿವಾಗುವುದಿಲ್ಲ ಹಾಗೂ ಅಗತ್ಯವಿರುವ ಪೋಷಕಾಂಶಗಳೂ ದೊರೆಯುತ್ತವೆ.
ನಿತ್ಯ ಬೆಳಗ್ಗೆ ಇದನ್ನು ಸೇವಿಸುವುದರಿಂದ ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆ ದೂರವಾಗುತ್ತದೆ. ಮಲಬದ್ಧತೆಯೂ ಇಲ್ಲವಾಗುತ್ತದೆ. ರಾತ್ರಿ ಮಲಗುವ ಮುನ್ನ ಒಂದು ಹಿಡಿ ಕಡಲೆಕಾಯಿ ನೆನೆಸಿಡಿ, ಬೆಳಿಗ್ಗೆ ಎದ್ದಾಕ್ಷಣ ತಿಂದು ನೋಡಿ.