ಕಡಜಗಳ ದಾಳಿಗೆ ಇಬ್ಬರು ರೈತರು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆ ಸಂತೇಬಾಚಹಳ್ಳಿ ಸಮೀಪದ ಅಘಲಯ ಗ್ರಾಮ ಪಂಚಾಯಿತಿಯ ನಾಗರಘಟ್ಟದಲ್ಲಿ ನಡೆದಿದೆ.
58 ವರ್ಷದ ನಾಗರಾಜೇಗೌಡ ಹಾಗೂ 60 ವರ್ಷದ ನಂಜೇಗೌಡ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಷಪೂರಿತ ಕಡಜಗಳು ದಾಳಿ ನಡೆಸಿದ್ದವು.
ಇವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇವರೊಂದಿಗಿದ್ದ ಕುಮಾರಸ್ವಾಮಿ ಎಂಬವರು ಸಹ ಗಂಭೀರವಾಗಿ ಗಾಯಗೊಂಡಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.