ಇಂದು ನಾವು ನಗರಗಳಲ್ಲೆಲ್ಲಾ ಗಗನದೆತ್ತರದ ಕಟ್ಟಡಗಳನ್ನು ನೋಡಿರ್ತೇವೆ. ಇಂತಹ ಕಟ್ಟಡ ಕಟ್ಟಲು ಕಾರ್ಮಿಕರು ಜೀವವನ್ನೇ ಪಣಕ್ಕಿಟ್ಟಿತಾ೯ರೆ. ಕೆಲವು ಬಾರಿಯಂತೂ ಕೆಲಸದ ಭರದಲ್ಲಿ ನಿರ್ಲಕ್ಷ್ಯವಹಿಸಿ ಜೀವವನ್ನೂ ಕಳೆದುಕೊಂಡಿದ್ದಾರೆ. ಇತ್ತೀಚೆಗೆ ಟ್ವಿಟ್ಟರ್ನಲ್ಲಿ ಈ ವಿಷಯದಲ್ಲಿ ಸತ್ಯಾಂಶವಿದ ಅನ್ನೂ ವಿಡಿಯೋ ಒಂದು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.
ಶ್ರೀನಗರದ ಡಾಕ್ಟರ್ ಶೌಕತ್ ಶಾಹ್ ಅವರು ತಮ್ಮ ಟ್ವಿಟರ್ ಅಕೌಂಟ್ನಲ್ಲಿ ವಿಡಿಯೋ ಒಂದನ್ನ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ನ ಕ್ಯಾಪ್ಪನ್ ನಲ್ಲಿ ” ಈತ ಮಾಡ್ತಿರುವ ಕೆಲಸ ಮೆಚ್ಚಲೇಬೇಕು.” ಆದರೆ ಈ ವಿಡಿಯೋ ನೋಡಿ ನೆಟ್ಟಿಗರಂತೂ ಫುಲ್ ಗರಂ ಆಗಿದ್ದಾರೆ. 11 ಸೆಕೆಂಡ್ನ ಈ ವಿಡಿಯೋದಲ್ಲಿ ಕಾರ್ಮಿಕ ಕಟ್ಟಡದ ತುತ್ತತುದಿಯಲ್ಲಿ ಕೆಲಸ ಮಾಡ್ತಿದ್ದಾನೆ.
ಕಟ್ಟಿಗೆಯ ಪುಟ್ಟ ಹಲಗೆ ಮೇಲೆ ಕೂತಿರುವ ಯುವಕನಿಗೆ, ಆತನಿಗೆ ಆಯತಪ್ಪಿ ಅಲ್ಲಿಂದ ಬಿದ್ದು ಬಿಡುವ ಭಯವೇ ಕಾಡ್ತಿಲ್ಲ. ಅಷ್ಟೆ ಅಲ್ಲ ಆತ ಬೀಳುವ ಭಯಕ್ಕೆ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೂಡಾ ಕೈಗೊಂಡಿಲ್ಲ. ಬದಲಾಗಿ ಅಷ್ಟು ಎತ್ತರ ಕೂತು ತನ್ನ ಪಾಡಿಗೆ ತಾನು ಕೆಲಸ ಮಾಡ್ತಿದ್ದಾನೆ.
ಈ ಪೋಸ್ಟ್ನ್ನ ಈಗಾಗಲೇ 60 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಈ ವಿಡಿಯೋ ನೋಡಿ ಗುತ್ತಿಗೆದಾರ, ಕಾರ್ಮಿಕನ ಜೀವನದೊಂದಿಗೆ ಆಟ ಆಡುತ್ತಿದ್ದಾನೆ ಅನ್ನೊ ಅರ್ಥದಲ್ಲಿ ನೆಟ್ಟಿಗರು ಮೆಸೇಜ್ ಮಾಡಿದ್ದಾರೆ.
ಕೆಲವರಂತೂ ಗುತ್ತಿಗೆದಾರನ ಈ ನಿರ್ಲಕ್ಷ್ಯ ನೋಡಿ ಆತನಿಗೆ ಶಿಕ್ಷೆ ಆಗಬೇಕು ಅಂತ ಹೇಳಿದ್ದಾರೆ. ಇನ್ನೊಬ್ಬರು, ಇಷ್ಟು ಎತ್ತರದಿಂದ ಕೆಲಸ ಮಾಡುವುದೇ ಅಪಾಯ. ಆದರೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವುದು ಅಪಾಯಕ್ಕೆ ಆಹ್ವಾನ ಕೊಟ್ಯಂತೆ ಎಂದು ಕಾಮೆಂಟ್ನಲ್ಲಿ ಹೇಳಿದ್ದಾರೆ. ಇನ್ನು ಕೆಲವರು ಭಾವುಕರಾಗಿ, ಹೊಟ್ಟೆ ಪಾಡಿಗಾಗಿ ಜನರು ಏನೇನೆಲ್ಲ ಕೆಲಸ ಮಾಡುವುದಕ್ಕೂ ಹಿಂಜರಿಯೊಲ್ಲ ಅನ್ನೋದಕ್ಕೆ ಈ ವಿಡಿಯೋ ಸಾಕ್ಷಿ. ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.