alex Certify ಕಟೀಲು ದೇಗುಲದಲ್ಲಿ ಪರಸ್ಪರ ಬೆಂಕಿ ಚೆಂಡುಗಳನ್ನು ಎಸೆದು ‘ತೂಟೆದಾರ’ ಆಚರಿಸಿದ ಭಕ್ತರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಟೀಲು ದೇಗುಲದಲ್ಲಿ ಪರಸ್ಪರ ಬೆಂಕಿ ಚೆಂಡುಗಳನ್ನು ಎಸೆದು ‘ತೂಟೆದಾರ’ ಆಚರಿಸಿದ ಭಕ್ತರು

ಮಂಗಳೂರು: ದಕ್ಷಿಣ ಕನ್ನಡದ ಪ್ರಸಿದ್ಧ ಕಟೀಲು ದೇವಸ್ಥಾನದ ಉತ್ಸವದಲ್ಲಿ ಭಕ್ತರು ಪರಸ್ಪರ ಬೆಂಕಿಯ ಚೆಂಡುಗಳನ್ನು ಎಸೆಯುತ್ತಾ ಹಳೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಇದನ್ನು ಸ್ಥಳೀಯ ಭಾಷೆಯಲ್ಲಿ ತೂಟೆದಾರ ಅಥವಾ ಅಗ್ನಿ ಖೇಲಿ ಎಂದು ಹೇಳಲಾಗುತ್ತದೆ.

ಭಕ್ತರು ಪರಸ್ಪರ ಬೆಂಕಿಯ ಚೆಂಡು ಎಸೆಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಮಂಗಳೂರಿನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ಕಟೀಲಿನ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಭಕ್ತರು ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸಿದ್ದಾರೆ.

ಪುರುಷರು ಶರ್ಟ್ ಧರಿಸದೆ ಕೇವಲ ಧೋತಿ ಮಾತ್ರ ಧರಿಸಿದ್ದು, ತಾಳೆಗರಿಗಳಿಗೆ ಬೆಂಕಿ ಹಚ್ಚಿ ಅದನ್ನು ಪರಸ್ಪರರ ಮೇಲೆ ಎಸೆದಿದ್ದಾರೆ. ಇದು ದುರ್ಗಾ ದೇವಿಗೆ ಗೌರವ ಸಲ್ಲಿಸುವ ಆಚರಣೆಯಾಗಿದೆ. ದೇವಾಲಯದ ಆವರಣದಲ್ಲಿದ್ದ ಅನೇಕ ಭಕ್ತರು ಈ ವಿಶಿಷ್ಟ ಆಚರಣೆಯನ್ನು ವೀಕ್ಷಿಸಿದ್ದಾರೆ.

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಉತ್ಸವದ ಸಂದರ್ಭದಲ್ಲಿ ಕೆಲವರಿಗೆ ಅಪಾಯಕಾರಿ ಎಂದು ತೋರುವ ಪ್ರಾಚೀನ ಆಚರಣೆಯು ಪ್ರತಿ ವರ್ಷ ನಡೆಯುತ್ತದೆ. ಭಾಗವಹಿಸುವವರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗುತ್ತದೆ. ಇಲ್ಲಿ ಒಬ್ಬರನ್ನೊಬ್ಬರು ಎದುರಿಸುತ್ತಾರೆ. ಅವರು ಸುಮಾರು 15 ರಿಂದ 20 ಮೀಟರ್ ದೂರದಿಂದ ಪರಸ್ಪರ ಬೆಂಕಿ ಹಚ್ಚಿರುವ ತಾಳೆಗರಿಗಳನ್ನು ಎಸೆಯುತ್ತಾರೆ. ಸುಮಾರು 15 ನಿಮಿಷಗಳ ಕಾಲ ಈ ಆಚರಣೆ ನಡೆಯಲಿದ್ದು, ನಂತರ ಭಕ್ತರು ದೇವಾಲಯವನ್ನು ಪ್ರವೇಶಿಸುತ್ತಾರೆ.

ಈ ಸಂಪ್ರದಾಯವು ಕಟೀಲು ಪಟ್ಟಣದ ಜನರಿಗೆ ಮತ್ತು ಅತ್ತೂರು ಮತ್ತು ಕೊಡತ್ತೂರಿನ ಅಕ್ಕಪಕ್ಕದ ಗ್ರಾಮಗಳ ಜನರಿಗೆ ಮಾತ್ರ ಸೀಮಿತವಾಗಿದೆ. ಭಕ್ತರು ಹಬ್ಬದ ಎಂಟು ದಿನಗಳ ಕಾಲ ಉಪವಾಸವನ್ನು ಆಚರಿಸುತ್ತಾರೆ. ಹಾಗೂ ಮದ್ಯ, ಮಾಂಸ  ಸೇವನೆಯಿಂದ ದೂರವಿರುತ್ತಾರೆ.

ದಕ್ಷಿಣ ಕನ್ನಡ ಜಿಲ್ಲೆಯ ನಂದಿನಿ ನದಿಯ ಮಧ್ಯದಲ್ಲಿ ದ್ವೀಪದ ಮೇಲೆ ನೆಲೆಗೊಂಡಿರುವ ದುರ್ಗಾಪರಮೇಶ್ವರಿ ದೇವಾಲಯವು ಕಟೀಲಿನ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...