alex Certify ಕಚೇರಿಯಲ್ಲಿ 8 ಗಂಟೆಗೂ ಹೆಚ್ಚು ಕಾಲ ಕುಳಿತೇ ಇರ್ತೀರಾ…..? ಇಲ್ಲಿದೆ ನಿಮಗೆ ತಿಳಿದಿರದ ಶಾಕಿಂಗ್‌ ಸಂಗತಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಚೇರಿಯಲ್ಲಿ 8 ಗಂಟೆಗೂ ಹೆಚ್ಚು ಕಾಲ ಕುಳಿತೇ ಇರ್ತೀರಾ…..? ಇಲ್ಲಿದೆ ನಿಮಗೆ ತಿಳಿದಿರದ ಶಾಕಿಂಗ್‌ ಸಂಗತಿ….!

ಕೆಲವರಿಗೆ ಸದಾ ಕುಳಿತೇ ಇರಬೇಕು ಎನಿಸುತ್ತಿರುತ್ತದೆ. ನಿಲ್ಲಲು ಅವರು ಇಷ್ಟಪಡುವುದಿಲ್ಲ. ಮನೆ, ಕಚೇರಿ ಅಥವಾ ಯಾವುದೇ ಸ್ಥಳವಾಗಿರಲಿ ಕುಳಿತುಕೊಳ್ಳಲು ಆಸನ ಹುಡುಕುತ್ತಾರೆ. ಅಂಥವರಲ್ಲಿ ನೀವೂ ಒಬ್ಬರಾಗಿದ್ದರೆ ನಿಮಗೆ ಅಪಾಯ ಗ್ಯಾರಂಟಿ.

ಸೈಮನ್ ಫ್ರೇಸರ್ ವಿಶ್ವವಿದ್ಯಾನಿಲಯದ ಅಂತರಾಷ್ಟ್ರೀಯ ಸಂಶೋಧನಾ ಅಧ್ಯಯನದಲ್ಲಿ ಬಹಿರಂಗವಾಗಿರೋ ಸಂಗತಿ ಕೇಳಿದ್ರೆ ಎಲ್ಲರೂ ಕುರ್ಚಿ ಬಿಟ್ಟು ಎದ್ದು ನಿಲ್ಲುವುದರಲ್ಲಿ ಅನುಮಾನವೇ ಇಲ್ಲ. ಹೆಚ್ಚು ಸಮಯ ಕುಳಿತುಕೊಂಡೇ ದಿನ ಕಳೆದ್ರೆ ಜೀವಕ್ಕೆ ಯಾವ ರೀತಿ ಅಪಾಯ ಅನ್ನೋದು ಸಂಶೋಧನೆಯಲ್ಲಿ ಬಹಿರಂಗವಾಗಿದೆ. 11 ವರ್ಷಗಳ ಕಾಲ ವಿಶ್ವದ 21 ದೇಶಗಳ 1,05,677 ಜನರನ್ನು ಸಂಶೋಧನೆಗೆ ಒಳಪಡಿಸಲಾಗಿದೆ.

ಅಧ್ಯಯನದ ಪ್ರಕಾರ ದಿನವಿಡೀ ಹೆಚ್ಚು ಸಮಯ ಕುಳಿತುಕೊಳ್ಳುವವರು ಬೇಗನೆ ಸಾಯುತ್ತಾರೆ. ಅವರಲ್ಲಿ ಸಾಮಾನ್ಯ ಜನರಿಗಿಂತ ಹೃದ್ರೋಗದ ಅಪಾಯ ಹೆಚ್ಚು. ದಿನಕ್ಕೆ 8 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕುಳಿತುಕೊಳ್ಳುವವರಿಗೆ ಪ್ರಾಣಾಪಾಯ ಹೆಚ್ಚಾಗಿರುತ್ತದೆ. ಹೃದಯದ ಸ್ನಾಯುವಿನಲ್ಲಿ ಊತ, ಪಾರ್ಶ್ವವಾಯು, ಹಾರ್ಟ್‌ ಫೇಲ್‌, ಹೃದಯ ನಾಳೀಯ ಕಾಯಿಲೆ ಸೇರಿದಂತೆ ಅನೇಕ ಸಮಸ್ಯೆಗೆ ಇವರು ತುತ್ತಾಗುವ ಸಾಧ್ಯತೆ ಶೇ.17 ರಿಂದ ಶೇ.50ವರೆಗೆ ಹೆಚ್ಚಾಗಿದೆ.

ದೀರ್ಘಕಾಲ ಕುಳಿತೇ ಇರುವುದರಿಂದ ಬೆನ್ನು ನೋವು, ಸುಸ್ತು, ತಲೆನೋವು ಸೇರಿದಂತೆ ಹಲವು ಸಮಸ್ಯೆಗಳು ಶುರುವಾಗುತ್ತವೆ. ಕಾರ್ಪೊರೇಟ್ ಜಗತ್ತಿಗೆ ಸಂಬಂಧಿಸಿದ ಅನೇಕ ಜನರು ಇಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ವಯಸ್ಸು ಹೆಚ್ಚಾದಂತೆ ಕುಳಿತುಕೊಳ್ಳುವುದರಿಂದಾಗುವ ದುಷ್ಪರಿಣಾಮಗಳೂ ಹೆಚ್ಚಾಗುತ್ತವೆ. ಈ ಸಮಸ್ಯೆಗಳು ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚು.

ಕುಳಿತುಕೊಳ್ಳುವ ಬದಲು ಎದ್ದು ನಿಂತು ಸಭೆ ನಡೆಸುವುದು, ಫೋನ್‌ನಲ್ಲಿ ನಿಂತು ಮಾತನಾಡುವುದು ಇವೆಲ್ಲವೂ ರಕ್ತ ಸಂಚಾರವನ್ನು ಸುಧಾರಿಸಿ ಹೃದಯ-ಮನಸ್ಸನ್ನು ಆರೋಗ್ಯವಾಗಿರಿಸುತ್ತದೆ. ಯೋಗ ಮಾಡುವುದು ಕೂಡ ಪರಿಣಾಮಕಾರಿಯಾಗಲಿದೆ. ಗೌಮುಖ ಆಸನ, ಮಂಡೂಕ ಆಸನ, ಪವನಮುಕ್ತ ಆಸನ, ಅನುಲೋಮ್ ವಿಲೋಮ್, ಡಯಾಫ್ರಾಗ್ಮ್ಯಾಟಿಕ್ ಬ್ರೀಥಿಂಗ್ ಸೇರಿದಂತೆ ಅನೇಕ ಆಸನಗಳನ್ನು ಮಾಡುವು ಮೂಲಕ ಗಂಭೀರ ಸಮಸ್ಯೆಗಳಿಂದ ಪಾರಾಗಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...