ಕಲಿಯುಗದಲ್ಲಿ ಬೇಗ ಕೃಪೆ ತೋರುವ ದೇವರು ಹನುಮಂತ ಎಂದು ನಂಬಲಾಗಿದೆ. ಚಿರಂಜೀವಿ ಹನುಮಂತನ ಪೂಜೆ ವಿಶೇಷತೆ ಪಡೆದಿದೆ. ಹನುಮಂತನ ಪೂಜೆ ಹಾಗೂ ಆರಾಧನೆಗೆ ಅನೇಕ ವಿಧಿ-ವಿಧಾನಗಳಿವೆ.
ಸಂಜೀವಿನ ಪರ್ವತವನ್ನು ಎತ್ತಿಕೊಂಡಿರುವ ಹನುಮಂತನ ಚಿತ್ರವನ್ನು ಪೂಜೆ ಮಾಡುವುದು ಶುಭಕರ. ಅದ್ರ ಮುಂದೆ ತುಪ್ಪದ ದೀಪವನ್ನು ಹಚ್ಚಬೇಕು. ಇದು ಆರೋಗ್ಯ ವೃದ್ಧಿಗೆ ನೆರವಾಗುತ್ತದೆ.
ಗದೆಯನ್ನು ಹಿಡಿದು ನಿಂತಿರುವ ಹನುಮಂತನ ಚಿತ್ರವನ್ನೂ ಪೂಜಿಸಬಹುದು. ಇದ್ರ ಮುಂದೆ ಮಲ್ಲಿಗೆ ಎಣ್ಣೆ ದೀಪವನ್ನು ಹಚ್ಚಿ. ಬಳಿಕ ಹನುಮಂತನಿಗೆ ಸಿಂಧೂರವನ್ನು ಅರ್ಪಿಸಿ. ನಂತ್ರ ಸಂಕಟ ನಾಶಕ್ಕೆ ಪ್ರಾರ್ಥನೆ ಮಾಡಿ.
ರಾಮಾಯಣ ಓದುತ್ತಿರುವ ಹನುಮಂತನ ಚಿತ್ರದ ಮುಂದೆ ತುಪ್ಪದ ದೀಪ ಹಚ್ಚಿ, ಸುವಾಸನೆ ಬತ್ತಿ ಹಚ್ಚಿ. ಬಳಿಕ ಬೆಲ್ಲವನ್ನು ಹನುಮಂತನಿಗೆ ಅರ್ಪಿಸಿ. ನಂತ್ರ ಶಿಕ್ಷಣ, ಬುದ್ಧಿ ವೃದ್ಧಿಗೆ ಪ್ರಾರ್ಥನೆ ಮಾಡಿ.
ಸೀತಾ-ರಾಮರ ಜೊತೆ ಹನುಮಂತನಿರುವ ಫೋಟೋವನ್ನು ಪೂಜೆ ಮಾಡಿ. ನಂತ್ರ ಕೆಂಪು ದೀಪವನ್ನು ಅರ್ಪಿಸಿ. ಆರ್ಥಿಕ ವೃದ್ಧಿಗೆ ಪ್ರಾರ್ಥನೆ ಮಾಡಿ.