ಇದೀಗ ಇಂಟರ್ನೆಟ್ ತುಂಬೆಲ್ಲಾ ಕಚಾ ಬಾದಮ್ ಜ್ವರ ಆವರಿಸಿದೆ. ಈ ಹಾಡಿನ ಹಿನ್ನೆಲೆ ಬಗ್ಗೆ ಬಹುಶಃ ನಿಮಗೆ ಗೊತ್ತಿರಲೇಬೇಕು. ಕಡಲೆಕಾಯಿ ಮಾರಲು ಭುವನ್ ಬಡ್ಯಾಕರ್ ಬಂಗಾಳಿ ಭಾಷೆಯಲ್ಲಿ ಹಾಡಿರುವ ಈ ಹಾಡು ಅಂತರ್ಜಾಲದಲ್ಲಿ ಬಿರುಗಾಳಿ ಸೃಷ್ಟಿಸಿದ್ದಂತೂ ಸುಳ್ಳಲ್ಲ. ಇನ್ಸ್ಟಾಗ್ರಾಂ ರೀಲ್‌ಗಳಿಗೆ ಅತ್ಯಂತ ಜನಪ್ರಿಯ ಹಾಡುಗಳಲ್ಲಿ ಒಂದಾಗಿದೆ. ಇದೀಗ ಈ ಹಾಡಿನಲ್ಲಿ ಪುಟ್ಟ ಬಾಲಕಿಯೊಬ್ಬಳು ತನ್ನ ಅದ್ಭುತ ನೃತ್ಯದ ಮೂಲಕ ಎಲ್ಲರ ಗಮನ ಸೆಳೆದಿದ್ದಾಳೆ.
ವಿಡಿಯೋದಲ್ಲಿ, ಪುಟ್ಟ ಬಾಲೆ ಬಂಗಾಳಿ ಹಾಡಿಗೆ ಉತ್ಸಾಹದಿಂದ ಕುಣಿಯುವುದನ್ನು ನೋಡಬಹುದು. ಸುತ್ತಲೂ ಜನಸಂದಣಿ ಇದ್ದರೂ ಬಾಲಕಿ ತನ್ನ ನೃತ್ಯದಲ್ಲಿ ಮಗ್ನಳಾಗಿದ್ದಾಳೆ. ಬಾಲಕಿಯ ಉತ್ಸಾಹದ ಡಾನ್ಸ್ ಅನ್ನು ನೋಡಿದ ಅಲ್ಲಿದ್ದ ಜನರು, ಚಪ್ಪಾಳೆ ತಟ್ಟಿ ಹುರಿದುಂಬಿಸಿದ್ದಾರೆ. ಇನ್ನೂ ಕೆಲವರು ತಮ್ಮ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.
ಈ ವಿಡಿಯೋವನ್ನು ಘಂಟಾ ಎಂಬ ಖಾತೆಯಿಂದ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಇದು ಆಗಾಗ್ಗೆ ಟ್ರೆಂಡಿಂಗ್ ಮೀಮ್‌ಗಳು ಮತ್ತು ವೈರಲ್ ವೀಡಿಯೊಗಳನ್ನು ಹಂಚಿಕೊಳ್ಳುತ್ತದೆ. ಸದ್ಯ, ಈ ವಿಡಿಯೋ ಸೂಪರ್ ವೈರಲ್ ಆಗಿದ್ದು, 2.6 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಮತ್ತು ಹಲವಾರು ಪ್ರೋತ್ಸಾಹದಾಯಕ ಕಾಮೆಂಟ್‌ಗಳನ್ನು ಸ್ವೀಕರಿಸಿದೆ. ಪ್ರತಿಭಾವಂತ ಬಾಲಕಿ ನೇಪಾಳ ಮೂಲದವಳು ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.