
ಭುವನ್ ಬಡ್ಯಾಕರ್ ಅವರಂತಹ ಕಲಾವಿದರು ಮನ್ನಣೆ ಪಡೆಯುವುದು ಬಹಳ ಅಪರೂಪ. ಸಾಮಾಜಿಕ ಮಾಧ್ಯಮದಲ್ಲಿ ಅವರ ಹಾಡು ವ್ಯಾಪಕವಾಗಿ ವೈರಲ್ ಆಗುತ್ತಿದ್ದಂತೆ ಅವರು ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಇದೀಗ ಬಡ್ಯಾಕರ್ ಅವರನ್ನು ಪಶ್ಚಿಮ ಬಂಗಾಳ ಪೊಲೀಸರು ತಮ್ಮ ಪ್ರಧಾನ ಕಛೇರಿಯಲ್ಲಿ ಸನ್ಮಾನಿಸಿದ್ದಾರೆ.
ಇಲ್ಲಿವರೆಗೆ ಬಂದು ತಲುಪುತ್ತೇನೆ ಎಂದು ಎಂದಿಗೂ ಯೋಚಿಸಿರಲಿಲ್ಲ. ದೇವರ ದಯೆ. ಈ ಬಗ್ಗೆ ಕನಸು ಕೂಡ ಕಂಡಿರಲಿಲ್ಲ. ತಾನು ಮಾಡಿರುವ ಹಾಡು ಹೈಲೈಟ್ ಆಗುತ್ತದೆ ಎಂದು ಎಂದಿಗೂ ಭಾವಿಸಿರಲಿಲ್ಲ ಅಂತಾ ಕಡಲೆಕಾಯಿ ಮಾರುತ್ತಾ ಜೀವನ ನಡೆಸುತ್ತಿದ್ದ ಬಡ್ಯಾಕರ್ ತಿಳಿಸಿದ್ದಾರೆ.
ಇನ್ನು ತಮ್ಮ ಭವಿಷ್ಯದ ಯೋಜನೆಗಳ ಕುರಿತು ಮಾತನಾಡಿದ ಬಡ್ಯಾಕರ್, ಬಾಲಿವುಡ್‌ನಿಂದ ಇದುವರೆಗೆ ತನ್ನನ್ನು ಯಾರೂ ಕೂಡ ಸಂಪರ್ಕಿಸಿಲ್ಲ. ಅಲ್ಲದೆ ಹಿಂದಿ ಭಾಷೆ ಬರುವುದಿಲ್ಲ. ಆದರೆ, ಸೌರವ್ ಗಂಗೂಲಿ ಅವರೊಂದಿಗೆ ಏನೋ ಚಿತ್ರೀಕರಣ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಬಡ್ಯಾಕರ್ ತಮ್ಮ ಕಡಲೆಕಾಯಿ ಮಾರುವ ಸಲುವಾಗಿ ಹಳ್ಳಿ ಹಳ್ಳಿಗೆ ತೆರಳಿ ಗ್ರಾಹಕರನ್ನು ಸೆಳೆಯಲು ಕಚಾ ಬಾದಾಮ್ ಹಾಡನ್ನು ರಚಿಸಿ ಹಾಡಿದ್ದಾರೆ. ಅವರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದೆ.