ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಕಂಪ್ಯೂಟರ್ ಗಳ ಮುಂದೆ ಕುಳಿತು ಕಚೇರಿ ಕೆಲಸ ಮಾಡುತ್ತಾರೆ. ಇದರಿಂದ ಕಣ್ಣುಗಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಆಗ ಕಣ್ಣಿನ ಸುತ್ತಲೂ ಕಪ್ಪುಕಲೆ ಮೂಡುತ್ತದೆ, ಕಣ್ಣುಗಳು ಊದಿಕೊಳ್ಳುತ್ತವೆ. ಆದ ಕಾರಣ ಈ ಸಮಸ್ಯೆಯಿಂದ ಕಣ್ಣುಗಳನ್ನು ರಕ್ಷಿಸಲು ಪ್ರತಿ ದಿನ ಹೀಗೆ ಮಾಡಿ.
ಸೌತೆಕಾಯಿ ಆ್ಯಂಟಿ ಆಕ್ಸಿಡೆಂಟ್ ಗಳಿವೆ. ಇದು ಕಣ್ಣುಗಳ ರಕ್ಷಣೆಯನ್ನು ಮಾಡುತ್ತದೆ. ಹಾಗೇ ರೋಸ್ ವಾಟರ್ ಚರ್ಮವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ಉರಿಯೂತದ ಏಜೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಚರ್ಮದ ಕೋಶಗಳನ್ನು ಪುನರುತ್ಪಾದಿಸುತ್ತದೆ.
ಹಾಗಾಗಿ ಸೌತೆಕಾಯಿ ರಸಕ್ಕೆ ರೋಸ್ ವಾಟರ್ ಮಿಕ್ಸ್ ಮಾಡಿ ಈ ಮಿಶ್ರಣಕ್ಕೆ ಹತ್ತಿಯ ಉಂಡೆ ಅಥವಾ ಪ್ಯಾಡ್ ಗಳನ್ನು ಅದ್ದಿ 10 ನಿಮಿಷಗಳ ಕಾಲ ಫ್ರಿಜ್ ನಲ್ಲಿಟ್ಟು ಬಳಿಕ ನಿಮ್ಮ ಕಣ್ಣುಗಳ ಮೇಲೆ 15 ನಿಮಿಷ ಇಟ್ಟುಕೊಳ್ಳಿ. ಇದರಿಂದ ಕಣ್ಣಿಗೆ ಬೇಕಾದ ಪೋಷಕಾಂಶಗಳು ದೊರೆತು ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ.