
ಎಷ್ಟು ಪ್ರಯತ್ನ ಮಾಡಿದ್ರೂ ಅನೇಕರಿಗೆ ಮದುವೆ ಭಾಗ್ಯ ಒಲಿದು ಬರೋದಿಲ್ಲ. ಇದು ಇಡೀ ಕುಟುಂಬದ ನೆಮ್ಮದಿ ಹಾಳು ಮಾಡುತ್ತದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತೆ ಎನ್ನುತ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ಉಪಾಯಗಳನ್ನು ಅನುಸರಿಸಿದ್ರೆ ಬೇಗ ಕಂಕಣ ಬಲ ಕೂಡಿ ಬರುತ್ತದೆಯಂತೆ.
ಮದುವೆಗೆ ತೊಂದರೆ ಎದುರಾಗುತ್ತಿದ್ದರೆ ಅಂತ ಜಾತಕದವರು 21 ಗುರುವಾರ ಸ್ನಾನದ ನೀರಿಗೆ ಅರಿಶಿನವನ್ನು ಹಾಕಿ ಸ್ನಾನ ಮಾಡಬೇಕು. ಇದ್ರಿಂದ ಬೇಗ ಮದುವೆ ಭಾಗ್ಯ ಕೂಡಿ ಬರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.
ಗುರುವಾರ 225 ಗ್ರಾಂ ಕಡಲೆ ಹಿಟ್ಟಿನಿಂದ ಐದು ಉಂಡೆ ಮಾಡಿ ಅದಕ್ಕೆ ಅರಿಶಿನ, ತುಪ್ಪ, ಬೆಲ್ಲ ಹಾಗೂ ಕಡಲೆ ಹಾಕಿ ಆಕಳಿಗೆ ನೀಡಿ. ನಂತ್ರ ನಿಮ್ಮ ಬಯಕೆಯನ್ನು ಆಕಳಿನ ಕಿವಿಯಲ್ಲಿ ಹೇಳಿ. ಬೆಳ್ಳಗಿರುವ ಆಕಳಿಗೆ ಇದನ್ನು ತಿನ್ನಿಸಬೇಡಿ.
ಶುಕ್ಲ ಪಕ್ಷದ ಯಾವುದೇ ಗುರುವಾರ ಐದು ಮಿಠಾಯಿ, ಮೂರು ಏಲಕ್ಕಿ, ಎರಡು ಅಡಿಕೆ ಜೊತೆ ತುಪ್ಪದ ದೀಪವನ್ನು ತೆಗೆದುಕೊಂಡು ಸರೋವರದ ತಟದಲ್ಲಿ ಪೂಜೆ ಮಾಡಿ. ಬೇಗ ಮದುವೆಯಾಗುವಂತೆ ಪ್ರಾರ್ಥನೆ ಮಾಡಿ.