ಕಾಡು ಉತ್ಪನ್ನ ಎಂದೇ ಕರೆಯಿಸಿಕೊಳ್ಳುವ ಜಾಯಿಕಾಯಿಯನ್ನು ಹಲವರು ಮನೆಯ ತೋಟಗಳಲ್ಲಿ ಬಳಸುತ್ತಾರೆ. ಪುಲಾವ್, ಬಿರಿಯಾನಿ ಮೊದಲಾದ ಮಸಾಲೆಗಳಿಗೆ ಜಾಯಿಕಾಯಿ ಹೆಚ್ಚಿನ ರುಚಿ ತಂದು ಕೊಡುತ್ತದೆ. ಅಡುಗೆ ಮನೆಯಲ್ಲಿ ಇದನ್ನು ಬಳಸುವ ವಿಧಾನದ ಹೊರತು ಔಷಧೀಯ ಪ್ರಯೋಜನಗಳೇನಿವೆ ಎಂಬುದನ್ನು ತಿಳಿಯೋಣ.
ಜಾಯಿಕಾಯಿಯನ್ನು ಹುರಿದು ಬೆಲ್ಲದ ಜೊತೆ ಸೇವಿಸುವುದರಿಂದ ಅಜೀರ್ಣದ ಸಮಸ್ಯೆ ದೂರವಾಗುತ್ತದೆ. ಬೇಧಿಯಾಗುತ್ತಿದ್ದರೆ ಅದೂ ನಿಲ್ಲುತ್ತದೆ. ಬಾಳೆಹಣ್ಣಿನ ಜೊತೆ ಇದರ ಪುಡಿಯನ್ನು ಸೇವಿಸುವುದರಿಂದಲೂ ಇದೇ ಲಾಭವನ್ನು ಪಡೆಯಬಹುದು.
ಕಾಮೋತ್ತೇಜಕವಾಗಿಯೂ ಇದನ್ನು ಬಳಸುತ್ತಾರೆ. ಅಂದರೆ ಇದರ ಸೇವನೆಯಿಂದ ದೇಹದಲ್ಲಿ ಕಾಮದ ಹಾರ್ಮೋನ್ ಗಳ ಉತ್ಪತ್ತಿ ಹೆಚ್ಚುತ್ತದೆ. ಇದರ ಪುಡಿಯನ್ನು ಕುದಿಯುವ ನೀರಿಗೆ ಹಾಕಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ವಾಸನೆ ಸಮಸ್ಯೆ ದೂರವಾಗುತ್ತದೆ.
ಇದನ್ನು ಬಳಸಿ ಹಲ್ಲುಜ್ಜುವುದರಿಂದ ಹಲ್ಲುನೋವು, ಹಲ್ಲಿನ ಸಂದಿಗಳಲ್ಲಿ ರಕ್ತಸ್ರಾವವಾಗುವುದು ಕಡಿಮೆಯಾಗುತ್ತದೆ. ಕೂದಲು ಉದುರುವ ಸಮಸ್ಯೆಗೂ ಜಾಯಿಕಾಯಿಯ ಎಣ್ಣೆ ರಾಮಬಾಣ. ತಲೆ ಬುಡಕ್ಕೆ ಮತ್ತು ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ನೀಳವಾಗಿ ಮತ್ತು ದಟ್ಟವಾಗಿ ಬೆಳೆಯುತ್ತದೆ.