ದೊಡ್ಡಪತ್ರೆ ಅಥವಾ ಸಾಂಬ್ರಾಣಿ ಎಂಬ ಹೆಸರಿನಿಂದ ಕರೆಯುವ ಈ ಹಸಿರು ಎಲೆಯ ಪ್ರಯೋಜನಗಳು ಹತ್ತಾರು. ಮನೆಯಂಗಳದ ಹೂಕುಂಡದಲ್ಲೇ ಇದನ್ನು ಬೆಳೆದು ಲಾಭ ಪಡೆಯಬಹುದು. ದಪ್ಪ ಎಲೆಯ ಇವುಗಳಲ್ಲಿ ನೀರಿನಂಶ ಹೆಚ್ಚಿದ್ದು ಔಷಧೀಯ ಗುಣಗಳನ್ನು ಒಳಗೊಂಡಿದೆ.
೬ ತಿಂಗಳ ಮಗುವಿನಿಂದ ಹಿಡಿದು ೬ ವರ್ಷದ ಮಕ್ಕಳವರೆಗೆ ಶೀತ ಕೆಮ್ಮು ಸಮಸ್ಯೆಗೆ ಈ ಸೊಪ್ಪು ರಾಮಬಾಣ. ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಕಾವಲಿಯ ಮೇಲಿಟ್ಟು ಬಿಸಿ ಮಾಡಿ ರಸ ಹಿಂಡಿ ಜೇನುತುಪ್ಪದೊಂದಿಗೆ ಮಕ್ಕಳಿಗೆ ಕೊಟ್ಟರೆ ಶೀತ, ಕೆಮ್ಮು, ಕಫದ ಸಮಸ್ಯೆ ನಿವಾರಣೆಯಾಗುತ್ತದೆ.
ಕಾಮಾಲೆ ರೋಗವುಳ್ಳವರು ಹತ್ತು ದಿನಗಳ ಕಾಲ ದೊಡ್ಡಪತ್ರೆ ಎಲೆಗಳನ್ನು ಆಹಾರ ರೂಪದಲ್ಲಿ ಸೇವಿಸಿದರೆ ರೋಗ ಗುಣವಾಗುತ್ತದೆ. ಕಂಬಳಿ ಹುಳುವಿನಂತಹ ಕೀಟಗಳು ಕಚ್ಚಿದ ಜಾಗಕ್ಕೆ ಎಲೆಯನ್ನು ಜಜ್ಜಿ ಉಜ್ಜಿದರೆ ಉರಿ ಇಲ್ಲವಾಗುತ್ತದೆ.
ದೊಡ್ಡಪತ್ರೆ ಎಲೆಯನ್ನು ಜಜ್ಜಿ ಆದರ ವಾಸನೆ ಸೇವಿಸಿದರೆ ಕಟ್ಟಿದ ಮೂಗಿನ ಸಮಸ್ಯೆಯಿಂದ ನಿವಾರಣೆ ಹೊಂದಬಹುದು. ಗ್ಯಾಸ್ಟ್ರಿಕ್ ಕೂಡಾ ಇದರಿಂದ ದೂರವಾಗುತ್ತದೆ. ರಕ್ತವನ್ನು ಶುದ್ಧೀಕರಿಸುತ್ತದೆ.
ಚಟ್ನಿ ತಂಬುಳಿಗಳ ರೂಪದಲ್ಲೂ ಇದನ್ನು ಬಳಸಬಹುದು. ಹಾಗಿದ್ದರೆ ತಡ ಏಕೆ ಮನೆಯಂಗಳದಲ್ಲಿ ದೊಡ್ಡಪತ್ರೆ ಗಿಡ ನೆಡಿ.