
ಓಲಾ ಕಂಪನಿ s1 ಏರ್ ಎಂಬ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಪರಿಚಯಿಸಲು ಮುಂದಾಗಿದ್ದು, ಈ ಸ್ಕೂಟರ್ ಕುರಿತು ಈಗಾಗಲೇ ಗ್ರಾಹಕರು ಆಸಕ್ತಿ ತೋರುತ್ತಿದ್ದಾರೆ.
ಹೊಸ ಸ್ಕೂಟರ್ ಗೆ ಬುಕಿಂಗ್ 2023ರ ಫೆಬ್ರವರಿಯಿಂದ ಆರಂಭವಾಗಲಿದ್ದು, 79,999 ರೂಪಾಯಿ ಬೆಲೆಯನ್ನು ನಿಗದಿಪಡಿಸಲಾಗಿದೆ.
999 ರೂಪಾಯಿ ಪಾವತಿಸುವ ಮೂಲಕ ಓಲಾ ಆಪ್ ನಲ್ಲಿ ಇದನ್ನು ಬುಕ್ ಮಾಡಬಹುದಾಗಿದೆ.
ಬಿಡುಗಡೆಯಾಗಲಿರುವ ಹೊಸ ಸ್ಕೂಟರ್ 2.5 ಕಿಲೋ ವ್ಯಾಟ್ ಬ್ಯಾಟರಿ ಹೊಂದಿದ್ದು, ಗಂಟೆಗೆ ಗರಿಷ್ಠ 85 ಕಿ.ಮೀ. ವೇಗದಲ್ಲಿ ಚಲಿಸುತ್ತದೆ ಎಂದು ಹೇಳಲಾಗಿದೆ.
4.3 ಸೆಕೆಂಡ್ ನಲ್ಲಿ ಈ ಸ್ಕೂಟರ್ 0-40 ಕಿ.ಮೀ. ವೇಗ ಪಡೆದುಕೊಳ್ಳಲಿದೆ ಎಂದು ಕಂಪನಿ ಹೇಳಿಕೊಂಡಿದೆ.