ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳಿಗೆ ಬೇಡಿಕೆ ಹೆಚ್ಚಾಗ್ತಿದೆ. ಹಾಗಾಗಿ ಸ್ಕೂಟರ್ ಕಂಪನಿಗಳ ಮಧ್ಯೆ ಕೂಡ ಪೈಪೋಟಿ ತೀವ್ರಗೊಂಡಿದೆ. ಸದ್ಯ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಅತಿ ಹೆಚ್ಚು ಮಾರಾಟವಾಗ್ತಿದೆ. ಇದಲ್ಲದೇ ಟಿವಿಎಸ್, ಒಕಿನಾವಾ ಕಂಪನಿಗಳ ಸ್ಕೂಟರ್ಗಳಿಗೂ ಸಾಕಷ್ಟು ಡಿಮ್ಯಾಂಡ್ ಇದೆ.
ಆದ್ರೀಗ ಈ ಎಲ್ಲಾ ಕಂಪನಿಗಳ ನಿದ್ದೆಗೆಡಿಸಲು ಹಳೆಯ ಬಜಾಜ್ ಆಟೋ ಕೂಡ ಸಜ್ಜಾಗಿದೆ. ಬಜಾಜ್ ಕಂಪನಿಯ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ನ ನವೀಕರಿಸಿದ ಆವೃತ್ತಿ ಸದ್ಯದಲ್ಲೇ ಮಾರುಕಟ್ಟೆಯಲ್ಲಿ ಬರಲಿದೆ. ಬಜಾಜ್ ಚೇತಕ್ನ ಶ್ರೇಣಿಯನ್ನು 20 ಪ್ರತಿಶತದಷ್ಟು ಸುಧಾರಿಸಲಾಗಿದೆ.
ಈ ಹಿಂದೆ ಬಜಾಜ್ ಚೇತಕ್ ಎಲೆಕ್ಟ್ರಿಕ್ ಸ್ಕೂಟರ್ ಒಮ್ಮೆ ಪೂರ್ತಿ ಚಾರ್ಜ್ ಮಾಡಿದ್ರೆ 90ಕಿಮೀ ವ್ಯಾಪ್ತಿಯನ್ನು ನೀಡುತ್ತಿತ್ತು. ಆದ್ರೀಗ ಹೊಸ ಸ್ಕೂಟರ್ 108 ಕಿಮೀ ಚಲಿಸಲಿದೆ. ಬ್ಯಾಟರಿ ಪ್ಯಾಕ್ ಮೊದಲಿನಂತೆ 2.88 kWh ಆಗಿರುತ್ತದೆ. ಹೆಚ್ಚಿನ ಶ್ರೇಣಿಗಾಗಿ ಬಜಾಜ್, ಸ್ಕೂಟರ್ನ ಸಾಫ್ಟ್ವೇರ್ ನವೀಕರಿಸುವ ಸಾಧ್ಯತೆಯಿದೆ.
ಸ್ಕೂಟರ್ 4 kW PMS ಮೋಟಾರ್ ಅನ್ನು ಬಳಸುತ್ತದೆ. ಸ್ಕೂಟರ್ನ ಗರಿಷ್ಠ ವೇಗ ಗಂಟೆಗೆ 70 ಕಿಮೀ. ಈ ಸ್ಕೂಟರ್ TVS iQube S ರೂಪಾಂತರಕ್ಕಿಂತ ಉತ್ತಮವಾಗಿದೆ. ಬಜಾಜ್ ಹೆಸರಾಂತ ಕಂಪನಿಯಾಗಿದ್ದರೂ ಮಾರಾಟದಲ್ಲಿ ಹೆಚ್ಚಿನ ಬೆಳವಣಿಯಾಗಿರಲಿಲ್ಲ. ಆದ್ರೀಗ ಹೊಸ ಸ್ಕೂಟರ್ ಕಂಪನಿಯ ಲಕ್ ಚೇಂಜ್ ಮಾಡಬಹುದು. ಬಜಾಜ್ ಚೇತಕ್ ಬೆಲೆಗಳು ಪ್ರಸ್ತುತ 1.51 ಲಕ್ಷದಿಂದ ಪ್ರಾರಂಭವಾಗುತ್ತವೆ.