ವಾಷಿಂಗ್ಟನ್ : ಯುಎಸ್ ನಲ್ಲಿ ಓಮಿಕ್ರಾನ್ ಸ್ಫೋಟವಾಗಿದ್ದು, ಮಕ್ಕಳನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದೆ. ಹೀಗಾಗಿ ಅಲ್ಲಿ ಓಮಿಕ್ರಾನ್ ನಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆಯಲ್ಲಿ ವಿಪರೀತ ಹೆಚ್ಚಳವಾಗುತ್ತಿದೆ.
ಕೊರೊನಾ ಹೊಸ ರೂಪಾಂತರಿ ಸೌಮ್ಯ ಲಕ್ಷಣ ಹೊಂದಿದೆ ಎಂದು ಆರಂಭಿಕ ಸೂಚನೆಗಳು ಹೇಳುತ್ತಿದ್ದರೂ ತೀವ್ರವಾಗಿ ಸೋಂಕು ಹಬ್ಬುತ್ತಿರುವುದು ಹಲವು ಆತಂಕಗಳಿಗೆ ದಾರಿ ಮಾಡಿ ಕೊಟ್ಟಿದೆ.
ಅಮೆರಿಕದಲ್ಲಿ ಡಿ. 23ರೊಳಗಾಗಿ 1,99,000 ಮಕ್ಕಳು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದ್ದು, ಒಂದೇ ತಿಂಗಳಲ್ಲಿ ಶೇ. 50ರಷ್ಟು ಪ್ರಕರಣಗಳು ವರದಿಯಾಗಿವೆ. ಅಲ್ಲದೇ, ಪ್ರತಿ ದಿನ ಸರಾಸರಿ 378 ಮಕ್ಕಳಲ್ಲಿ ಕಂಡು ಬರುತ್ತಿದ್ದ ಸೋಂಕಿನ ಪ್ರಕರಣದಲ್ಲಿ ಶೇ. 66ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ.
BIG NEWS: ಬೆಕ್ಕಿನ ಕನಸಲ್ಲಿ ಇಲಿ ಬಂದಂತಾಗಿದೆ: ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದ ಸಿಎಂ
ಅಮೆರಿಕದಲ್ಲಿ ಕೊರೊನಾ ಹಾಗೂ ರೂಪಾಂತರಿಯಿಂದಾಗಿ ಮಕ್ಕಳನ್ನು ಹೆಚ್ಚಾಗಿ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. 5 ರಿಂದ 11 ವರ್ಷದೊಳಗಿನ ಮಕ್ಕಳಲ್ಲಿ ಲಸಿಕೆ ದರವೂ ಕಡಿಮೆಯಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರ ವೈದ್ಯಕೀಯ ಸಲಹೆಗಾರ ಆಂಥೋನಿ ಫೌಸಿ ಹೇಳಿದ್ದಾರೆ.
ಓಮಿಕ್ರಾನ್ ಇನ್ನೂ ಹೆಚ್ಚಿನ ಮಕ್ಕಳಲ್ಲಿ ಕಾಣಿಸಿಕೊಳ್ಳಬಹುದು. ವಯಸ್ಕರಲ್ಲಿ ಕಂಡು ಬರುತ್ತಿರುವ ಸೌಮ್ಯ ಲಕ್ಷಣವೇ ಕಂಡು ಬರಲಿದೆ ಎಂದು ಅಲ್ಲಿನ ಅಧ್ಯಯನ ತಂಡ ಹೇಳಿದೆ. ಅಲ್ಲದೇ, ಅಲ್ಲಿ ಚಿಕ್ಕ ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯವನ್ನು ಇನ್ನೂ ತ್ವರಿತಗೊಳಿಸಬೇಕಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.