ಫೆಂಗ್ ಶುಯಿ ವಾಸ್ತುಶಾಸ್ತ್ರ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಪ್ರಸಿದ್ಧಿ ಪಡೆಯುತ್ತಿದೆ. ವಿಶೇಷವಾಗಿ ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಫೆಂಗ್ ಶುಯಿ ಸೂತ್ರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ನಮ್ಮ ಏಕಾಗ್ರತೆ ಹೆಚ್ಚಿಸಿಕೊಳ್ಳಲು ಕೂಡ ನಾವು ಈ ಸೂತ್ರಗಳನ್ನು ಪಾಲಿಸಬಹುದಾಗಿದೆ.
ಏಕಾಗ್ರತೆ ಹೆಚ್ಚಿಸಿಕೊಳ್ಳಲು ಏನು ಮಾಡಬೇಕೆಂದು ಫೆಂಗ್ ಶುಯಿಯಲ್ಲಿ ಹೇಳಲಾಗಿದೆ.
ಅಧ್ಯಯನದ ಕೊಠಡಿಯಲ್ಲಿ ಹಸಿರು ಪರದೆಯನ್ನು ಹಾಕಿ.
ಅಧ್ಯಯನದ ಕೊಠಡಿ ಅಥವಾ ಮನೆಯಲ್ಲಿ ಹಾಳಾದ ಆಟಿಕೆಗಳಿದ್ದರೆ ಅದನ್ನು ತಕ್ಷಣ ಹೊರಗೆ ಹಾಕಿ. ಅದ್ರಲ್ಲಿ ಉತ್ಪನ್ನವಾಗುವ ನಕಾರಾತ್ಮಕ ಶಕ್ತಿಗಳು ಮೂಗು, ಕಿವಿ, ಗಂಟಲು ಹಾಗೂ ಕಣ್ಣಿನ ಸೋಂಕಿಗೆ ಕಾರಣವಾಗುತ್ತದೆ.
ಅಧ್ಯಯನದ ಕೊಠಡಿಯಲ್ಲಿ ಹಾಳಾಗಿರುವ ಗಡಿಯಾರವನ್ನು ಇಡಬೇಡಿ
ಟೇಬಲ್ ಮೇಲೆ ಗ್ಲಾಸ್ ಅಥವಾ ಸ್ಫಟಿಕದ ವಸ್ತುವನ್ನು ಇಡಿ. ಗ್ಲಾಸಿನ ಗಣೇಶ ಮೂರ್ತಿ, ಹನುಮಂತನ ಮೂರ್ತಿ ಅಥವಾ ಎಜುಕೇಷನ್ ಟವರ್ ಇಡಿ.
ಅಧ್ಯಯನ ಕೋಣೆಯ ಆಗ್ನೇಯ ದಿಕ್ಕಿನಲ್ಲಿ ಮನಿ ಪ್ಲಾಂಟ್ ಹಾಗೂ ಈಶಾನ್ಯ ದಿಕ್ಕಿಗೆ ಅಕ್ವೇರಿಯಂ ಇಡಿ.
ವಿದ್ಯಾರ್ಥಿಗಳು ಪೂರ್ವದ ಗೋಡೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಹಸಿರು ಬಲ್ಬ್, ಹಸಿರು ಸಸ್ಯ ಹಾಗೂ ಹಸಿರು ಪಿರಾಮಿಡ್ ಪೂರ್ವಕ್ಕಿಡಿ.
ಕೆಲವೊಮ್ಮೆ ವಸ್ತುಗಳನ್ನು ವಾಸ್ತು ಪ್ರಕಾರವಿಟ್ಟರೂ ಸಫಲತೆ ಸಿಗುವುದಿಲ್ಲ. ಕೋಣೆಯಲ್ಲಿ ಸ್ಥಿರತೆ ಇರುವುದಿಲ್ಲ. ಹಾಗಾದಲ್ಲಿ ವಾರಕ್ಕೊಮ್ಮೆ ಅಧ್ಯಯನದ ಕೋಣೆಗೆ ಉಪ್ಪು ನೀರನ್ನು ಚಿಮುಕಿಸಿ. ಇಲ್ಲವೆ ಉಪ್ಪು ಬೆರೆಸಿದ ನೀರನ್ನು ಇಡಿ. ನಂತ್ರ ಪರಿಣಾಮ ಗಮನಿಸಿ.