ಬಾಲ್ಯದಲ್ಲಿ ಎಲ್ಲರಿಗೂ ಓದೋದು ಅಂದ್ರೆ ಬೇಸರ. ಸ್ನೇಹಿತರೊಂದಿಗೆ ಹೊರಗೆ ಆಟವಾಡಲು ಬಯಸುವವರೇ ಹೆಚ್ಚು. ಓದು ಅಥವಾ ಹೋಮ್ ವರ್ಕ್ ಮಾಡು ಅಂದಾಗಲೆಲ್ಲ ಕುಂಟು ನೆಪ ಹೇಳಿ ತಪ್ಪಿಸಿಕೊಳ್ಳಲು ನೋಡುವುದು, ಕೋಪ ಮಾಡಿಕೊಳ್ಳುವುದು ಇವೆಲ್ಲ ಮಾಮೂಲು.
ಇಲ್ಲೊಬ್ಬ ಪುಟಾಣಿ ತನ್ನ ಅಮ್ಮನ ಬಳಿ ಅದೇ ರೀತಿ ಹೈಡ್ರಾಮಾ ಮಾಡ್ತಿರೋದು ವೈರಲ್ ಆಗಿದೆ. ಹೋಮ್ ವರ್ಕ್ ಮಾಡು ಅಂದಿದ್ದಕ್ಕೆ ಬಾಲಕ ಅಳಲಾರಂಭಿಸಿದ್ದಾನೆ. ಜೀವನ ಪೂರ್ತಿ ನಾನು ಓದು, ಬರೆದು ಮಾಡಿ ಮುದುಕನಾಗಿ ಹೋಗ್ತೇನೆ ಅಂತಾ ಕಣ್ಣೀರು ಹಾಕಿದ್ದಾನೆ.
ಹೋಮ್‌ವರ್ಕ್ ಮಾಡುವಂತೆ ಗದರಿದ ಅಮ್ಮನ ಮೇಲೆ ಮಗು ಕೋಪ ಮಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಮಗನ ಅನಿರೀಕ್ಷಿತ ಉತ್ತರ ಕೇಳಿದ ಆತನ ತಾಯಿ, ಮುದುಕನಾದರೂ ಪರವಾಗಿಲ್ಲ, ಅನಕ್ಷರಸ್ಥನಾಗಿರಬೇಡ. ಓದು, ಬರೆದು ಮಾಡಿಯೇ ಮುದುಕನಾಗು ಅಂತಾ ಹೇಳಿದ್ದಾಳೆ. ಟ್ವಿಟರ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ
ಸುಮಾರು 4 ಲಕ್ಷಕ್ಕೂ ಹೆಚ್ಚು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. 3800ಕ್ಕೂ ಅಧಿಕ ರೀಟ್ವೀಟ್‌ಗಳನ್ನು ಇದು ಗಳಿಸಿದೆ. ಪುಟ್ಟ ಬಾಲಕನ ಹತಾಶೆ ನೋಡಿ ನೆಟ್ಟಿಗರು ನಗೆಗಡಲಲ್ಲಿ ತೇಲಿದ್ದಾರೆ. ಮಕ್ಕಳನ್ನು ಅಳಿಸಿ ಓದಿಸುವ ಬದಲು ಆಟದ ಮೂಲಕವೇ ಪಾಠ ಮಾಡಬೇಕೆಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮಗುವಿನ ಮುದ್ದು ಮಾತುಗಳಂತೂ ಎಲ್ಲರಿಗೂ ಇಷ್ಟವಾಗಿದೆ.