ಓಣಂ ಹಬ್ಬದ ಸಂದರ್ಭದಲ್ಲಿ ಒಂದೇ ವಾರಕ್ಕೆ ಕೇರಳದಲ್ಲಿ ಬರೋಬ್ಬರಿ 625 ಕೋಟಿ ರೂಪಾಯಿ ಮೊತ್ತದ ಮದ್ಯ ಮಾರಾಟವಾಗಿದ್ದು, ಇದು ಹೊಸ ದಾಖಲೆಯಾಗಿದೆ.
ಅದರಲ್ಲೂ ಇದೇ ಮೊದಲ ಬಾರಿಗೆ ದಿನವೊಂದರಲ್ಲಿ ನೂರು ಕೋಟಿ ರೂಪಾಯಿ ಮೊತ್ತದ ಮದ್ಯ ಮಾರಾಟವಾಗಿದ್ದು, ಬೆವೇರಿಜಸ್ ಕಾರ್ಪೊರೇಷನ್ ಇತಿಹಾಸದಲ್ಲಿ ಹೀಗೆ ನಡೆದಿರುವುದು ಮೊಟ್ಟಮೊದಲು.
ಗಮನಾರ್ಹ ಸಂಗತಿ ಎಂದರೆ ಶೇಕಡ 85ರಷ್ಟು ಮದ್ಯ ಮಾರಾಟವನ್ನು ಕೇರಳ ರಾಜ್ಯ ಸರ್ಕಾರವೇ ವಹಿಸಿಕೊಂಡಿರುವುದರಿಂದ ಆರ್ಥಿಕ ಮುಗ್ಗಟ್ಟಿನ ಸಂದರ್ಭದಲ್ಲಿ ಅನುಕೂಲವಾದಂತಾಗಿದೆ.