ಪತ್ನಿ ಹಾಗೂ ಮಗು ಕಾಣೆಯಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವ್ಯಕ್ತಿಯೊಬ್ಬ ಇಬ್ಬರನ್ನು ಹುಡುಕಿಕೊಟ್ಟವರಿಗೆ ಐದು ಸಾವಿರ ಬಹುಮಾನ ನೀಡುವುದಾಗಿ ಘೋಷಿಸಿದ್ದಾನೆ. ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿದ್ದಾಗ ಆತನ ಪತ್ನಿ ಮಗುವಿನೊಂದಿಗೆ ಮನೆಯ ಕಿಟಕಿ ಒಡೆದು ಓಡಿ ಹೋಗಿದ್ದಾಳೆ. ಬಂಗಾಳದ ಪಿಂಗ್ಲಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ವೃತ್ತಿಯಲ್ಲಿ ಬಡಗಿಯಾಗಿರುವ ಪತಿ, ಪತ್ನಿ ಮತ್ತು ಮಗುವನ್ನು ಹುಡುಕಿಕೊಂಡು ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡಿದ್ದು ವ್ಯರ್ಥವಾಗಿದೆ. ಕೊನೆಯ ಉಪಾಯವಾಗಿ, ಅವರು ಸಾಮಾಜಿಕ ಮಾಧ್ಯಮದಲ್ಲಿ ಹತಾಶ ಮನವಿಯನ್ನು ಹಾಕಿದ್ದಾರೆ ಎಂದು ವರದಿಯಾಗಿದೆ.
ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಅವರು, “ಡಿಸೆಂಬರ್ 9 ರಿಂದ ಈ ಮಹಿಳೆ ಮತ್ತು ಮಗು ಕಾಣೆಯಾಗಿದ್ದಾರೆ. ಅವರನ್ನು ಪತ್ತೆ ಮಾಡಿದವರು, ದಯವಿಟ್ಟು ನನಗೆ ತಿಳಿಸಿ. ತಿಳಿಸಿದ ವ್ಯಕ್ತಿಗೆ (ಅವರನ್ನು ಹುಡುಕಿಕೊಟ್ಟವರು) 5,000 ರೂಪಾಯಿ ಬಹುಮಾನ ನೀಡುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ. ಆದರೆ, ಇದರಿಂದಲು ಅವರಿಗೆ ಪ್ರಯೋಜನವಾಗಿಲ್ಲ.
BIG NEWS: 60 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆಯಲು ಬೇಕಿಲ್ಲ ಕೊಮಿರ್ಬಿಡಿಟಿ ದಾಖಲೆ; ಕೇಂದ್ರದಿಂದ ಮಹತ್ವದ ಘೋಷಣೆ
ಡಿಸೆಂಬರ್ 9 ರಂದು ಅವರು ಕೆಲಸದ ನಿಮಿತ್ತ ಹೈದರಾಬಾದ್‌ನಲ್ಲಿದ್ದಾಗ ಘಟನೆಯ ಬಗ್ಗೆ ಅವರಿಗೆ ಮಾಹಿತಿ ನೀಡಲಾಯಿತು. ಮರುದಿನ ಅವನು ತನ್ನ ಹೆಂಡತಿಯನ್ನು ಹುಡುಕಲು ತನ್ನ ಗ್ರಾಮಕ್ಕೆ ಹಿಂದಿರುಗಿದರು. ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದರು ಯಾವ ಕ್ರಮ ಕೈಗೊಂಡಿಲ್ಲ ಎಂದು ಪತಿ ಹೇಳಿದರೆ, ಘಟನೆಯ ಬಗ್ಗೆ ಕುಟುಂಬದವರಿಂದ ಮಾಹಿತಿ ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಯ ವಿವರಗಳು ಸ್ಪಷ್ಟವಾಗಿಲ್ಲವಾದರೂ, ಪತಿ ತನ್ನ ಹೆಂಡತಿ ತನಗೆ ಮೊಬೈಲ್ ಫೋನ್ ತಂದ ವ್ಯಕ್ತಿಯೊಂದಿಗೆ ಓಡಿಹೋಗಿದ್ದಾಳೆ ಎಂದು ಪತಿ ಆರೋಪಿಸಿದ್ದಾರೆ. ನನ್ನ ಪತ್ನಿ ರಾತ್ರಿಯಲ್ಲಿ ಈ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಳು. ಡಿಸೆಂಬರ್ 9 ರ ರಾತ್ರಿ ನಂಬರ್ ಇಲ್ಲದ ನ್ಯಾನೋ ಕಾರು ಈ ಪ್ರದೇಶಕ್ಕೆ ಬಂದಿದ್ದು, ಅದೇ ವಾಹನದಲ್ಲಿ ತನ್ನ ಪತ್ನಿ ಓಡಿಹೋಗಿದ್ದಾಳೆ ಎಂದು ಶಂಕಿಸಿದ್ದಾರೆ.
ಮನೆಯಿಂದ ಹೊರಡುವ ಮುನ್ನ ಹಣ, ಚಿನ್ನಾಭರಣ, ಮತದಾರರ ಗುರುತಿನ ಚೀಟಿ, ಆಧಾರ್ ಕಾರ್ಡ್, ಮಗುವಿನ ಜನನ ಪ್ರಮಾಣ ಪತ್ರವನ್ನೂ ತೆಗೆದುಕೊಂಡು ಹೋಗಿದ್ದಾಳೆ. ನಾನು, ನನ್ನ ಕುಟುಂಬ ಅವಳು ಮರಳಿ ಬರಲಿ ಎಂದು ಕಾಯುತ್ತಿದ್ದೇವೆ, ಅವನು ನೀಡಿರುವ ವಸ್ತುಗಳಿಗೆ ನನ್ನ ಪತ್ನಿ ಮರುಳಾಗಿದ್ದಾಳೆ. ಆದರೆ, ಈ ಹಿಂದೆ ಏನು ಮಾಡಿದ್ದಳು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ , ಅವರು ಹಿಂತಿರುಗಬೇಕೆಂದು ನಾನು ಬಯಸುತ್ತೇನೆ, ಹೆಂಡತಿ ಮಕ್ಕಳೊಂದಿಗೆ ಸಂತೋಷವಾಗಿ ಜೀವನ ಕಳೆಯಬೇಕೆಂಬುದೆ ನನ್ನ ಆಸೆ ಎಂದು ಪತಿ ಹೇಳಿದ್ದಾರೆ.