
ಥೈಲ್ಯಾಂಡ್ನ ಹಿರಿಯ ಅಥ್ಲೀಟ್ 102 ರ ಸವಾಂಗ್ ಜನಪ್ರಮ್ 100 ಮೀಟರ್ ಓಟವನ್ನು 27.08 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದ್ದಾರೆ. ಕಳೆದ ವಾರಾಂತ್ಯದಲ್ಲಿ ಥೈಲ್ಯಾಂಡ್‌ನ ನೈಋತ್ಯ ಸಮುತ್ ಸಾಂಗ್‌ಖ್ರಾಮ್ ಪ್ರಾಂತ್ಯದಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ, ಸವಾಂಗ್ 100-105 ವರ್ಷಗಳ ವಿಭಾಗದಲ್ಲಿ ಎಲ್ಲಾ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
ಈ ವರ್ಷ 100-ಮೀಟರ್ ಸ್ಪ್ರಿಂಟ್‌ಗಾಗಿ ಸವಾಂಗ್ ಅವರ ವಯೋಮಾನದ ಹೊಸ ಥಾಯ್ ದಾಖಲೆಯಾಗಿದೆ. ಪ್ರಸ್ತುತ ಏಕೈಕ ವಿಶ್ವ ದಾಖಲೆಯನ್ನು ಹೊಂದಿರುವ ಉಸೇನ್ ಬೋಲ್ಟ್ 2009 ರಲ್ಲಿ 9.58 ಸೆಕೆಂಡುಗಳಲ್ಲಿ ಗುರಿ ತಲುಪಿ ದಾಖಲೆ ಸೃಷ್ಟಿಸಿದ್ದಾರೆ.
ಸವಾಂಗ್ ಆಗ್ನೇಯ ಏಷ್ಯಾದ ಅತ್ಯಂತ ಹಿರಿಯ ಅಥ್ಲೀಟ್ ಎಂದು ಹೆಸರುವಾಸಿಯಾಗಿದ್ದಾರೆ. ವಾರ್ಷಿಕ ಥೈಲ್ಯಾಂಡ್ ಮಾಸ್ಟರ್ ಅಥ್ಲೀಟ್ ಚಾಂಪಿಯನ್‌ಶಿಪ್‌ಗಳಲ್ಲಿ ನಾಲ್ಕು ಬಾರಿ ಭಾಗವಹಿಸಿದ್ದಾರೆ. ವಿಶೇಷವಾಗಿ 100 ಮೀಟರ್ ಡ್ಯಾಶ್, ಜಾವೆಲಿನ್ ಮತ್ತು ಡಿಸ್ಕಸ್ ಸ್ಪರ್ಧೆಗಳಲ್ಲಿ ಅವರು ಸ್ಪರ್ಧಿಸಿದ್ದಾರೆ.
ಸವಾಂಗ್ ಅವರು ಪ್ರತಿದಿನ ತನ್ನ 70 ವರ್ಷದ ಪುತ್ರಿ ಸಿರಿಪಾನ್‌ಳೊಂದಿಗೆ ವಾಕಿಂಗ್ ಹೋಗುತ್ತಾರೆ. ನಂತರ ಅವರ ತೋಟದಲ್ಲಿ ಬಿದ್ದ ಎಲೆಗಳನ್ನು ಗುಡಿಸುವುದರ ಜೊತೆಗೆ ಇತರೆ ಸರಳ ಮನೆಕೆಲಸಗಳನ್ನು ಮಾಡುತ್ತಾರೆ.
1996 ರಲ್ಲಿ ಥೈಲ್ಯಾಂಡ್ ಮಾಸ್ಟರ್ ಅಥ್ಲೀಟ್ ಚಾಂಪಿಯನ್‌ಶಿಪ್‌ಗಳು ಪ್ರಾರಂಭವಾದಾಗ, ಸುಮಾರು 300 ಮಂದಿ ಸ್ಪರ್ಧಿಗಳು ಮಾತ್ರ ಇದ್ದರು. ಆದರೆ ಇಂದು, 35 ರಿಂದ 102 ವರ್ಷ ವಯಸ್ಸಿನ 2,000 ಕ್ಕಿಂತ ಹೆಚ್ಚು ಜನರಿದ್ದಾರೆ.